ಸೋಮವಾರ, ಮಾರ್ಚ್ 8, 2021
22 °C

ಬರೇಲಿ ಮತ ಪಟ್ಟಿಯಲ್ಲಿ ಪ್ರಿಯಾಂಕಾ ಹೆಸರು: ವಿಚಾರಣೆ

ಪಿಟಿಐ Updated:

ಅಕ್ಷರ ಗಾತ್ರ : | |

ಬರೇಲಿ ಮತ ಪಟ್ಟಿಯಲ್ಲಿ ಪ್ರಿಯಾಂಕಾ ಹೆಸರು: ವಿಚಾರಣೆ

ಬರೇಲಿ, ಉತ್ತರ ಪ್ರದೇಶ: ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಅವರು ಬರೇಲಿಯಲ್ಲಿರುವ ತಮ್ಮ ಮನೆಯನ್ನು ಖಾಲಿ ಮಾಡಿ 17 ವರ್ಷಗಳಾದರೂ ಇಲ್ಲಿಯ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇರುವುದು ಈಗ ಬೆಳಕಿಗೆ ಬಂದಿದೆ.

2000ನೇ ಸಾಲಿನಲ್ಲಿ ಪ್ರಿಯಾಂಕಾ ಅವರು ‘ಭುವನ ಸುಂದರಿ’ ಯಾಗಿ ಆಯ್ಕೆಯಾದ ನಂತರ ಅವರ ಕುಟುಂಬ ಬರೇಲಿಯನ್ನು ಬಿಟ್ಟು ಮುಂಬೈಗೆ ಬಂದು ನೆಲೆಸಿದೆ. ಬರುವ ಸಂದರ್ಭದಲ್ಲಿ ಅವರ ತಂದೆ ಕರ್ನಲ್‌ ಅಶೋಕ್‌ ಚೋಪ್ರಾ ಅವರು ಈ ಬಗ್ಗೆ ಸಂಬಂಧಿತ ಅಧಿಕಾರಿಗಳಿಗೆ ಪತ್ರ ಕೂಡ ಕೊಟ್ಟು ಬಂದಿದ್ದರು. ಆದರೆ ಇದುವರೆಗೆ ಪ್ರಿಯಾಂಕಾ ಹಾಗೂ ಅವರ ತಾಯಿಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

‘ಪ್ರತಿ ಚುನಾವಣೆ ಸಂದರ್ಭದಲ್ಲಿ ಮತದಾರರ ಮನೆಯ ಸಮೀಕ್ಷೆ ನಡೆಸಲಾಗುತ್ತದೆ. ಚೋಪ್ರಾ ಅವರ ಮನೆ ಬಹಳ ವರ್ಷಗಳಿಂದ ಬೀಗ ಹಾಕಿದ್ದರೂ ಆ ಬಗ್ಗೆ ಸಂಬಂಧಿಸಿದವರು ಗಮನಿಸದೇ ಇರುವುದು ಲೋಪ. ಆದ್ದರಿಂದ ಈ ಬಗ್ಗೆ ಸ್ಥಳೀಯ ಅಧಿಕಾರಿಗಳ ವಿವರಣೆ ಕೇಳಲಾಗಿದೆ, ವಿಚಾರಣೆ ನಡೆಯುತ್ತಿದೆ’ ಎಂದು ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಅಭಿಜಿತ್‌ ಮುಖರ್ಜಿ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.