‘ಕರಾಳ ದಿನಾಚರಣೆ ಹಾಸ್ಯಾಸ್ಪದ’

ಹಾಸನ: ದೇಶದಲ್ಲಿ ನೋಟು ನಿಷೇಧ ಮಾಡಿದ ಆರಂಭದಲ್ಲಿ ಸ್ವಾಗತ ಮಾಡಿದ್ದ ರಾಜ್ಯ ಕಾಂಗ್ರೆಸ್ ನಾಯಕರು, ಇಂದು ಕರಾಳ ದಿನಾಚರಣೆ ಆಚರಣೆ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ.
ನೋಟು ನಿಷೇಧ ಮಾಡಿದಾಗ ಕಾಂಗ್ರೆಸ್ ಸಚಿವರಾದ ಟಿ.ಬಿ.ಜಯಚಂದ್ರ, ರಮೇಶ್‌ಕುಮಾರ್, ರೋಷನ್ ಬೇಗ್, ಬಸವರಾಜ ರಾಯರೆಡ್ಡಿ ಸ್ವಾಗತ ಮಾಡಿದ್ದರು. ಸಚಿವ ಎಚ್.ಕೆ. ಪಾಟೀಲ ಒಂದು ಹೆಜ್ಜೆ ಮುಂದೆ ಹೋಗಿ ಅಂದಿನ ಹಣಕಾಸು ಸಚಿವ ಚಿದಂಬರ್‌ಗೆ ನೋಟು ರದ್ದು ಮಾಡುವಂತೆ ಸಲಹೆ ನೀಡಿದ್ದೆ ಎಂದು ಹೇಳಿದ್ದರು.
ಆದರೆ ಇಂದು ರಾಜಕೀಯ ಕಾರಣಕ್ಕಾಗಿ ಕರಾಳ ದಿನಾಚರಣೆಗೆ ಮುಂದಾಗಿದ್ದಾರೆ. ಇದು ಕಾಂಗ್ರೆಸ್ ನ ಗೋಸುಂಬೆತನಕ್ಕೆ ಸಾಕ್ಷಿ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.