ಮಂಗಳವಾರ, ಮಾರ್ಚ್ 9, 2021
23 °C

ಕಾರಿನಲ್ಲಿ ಎದೆ ಹಾಲು ಉಣಿಸುತ್ತಿದ್ದ ತಾಯಿ: ಟೋಯಿಂಗ್‌ ಮಾಡಿ ಹೊರಟ ಮುಂಬೈ ಪೊಲೀಸ್‌

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಕಾರಿನಲ್ಲಿ ಎದೆ ಹಾಲು ಉಣಿಸುತ್ತಿದ್ದ ತಾಯಿ: ಟೋಯಿಂಗ್‌ ಮಾಡಿ ಹೊರಟ ಮುಂಬೈ ಪೊಲೀಸ್‌

ಮುಂಬೈ: ಕಾರಿನಲ್ಲಿ ತನ್ನ ಮಗುವಿಗೆ ಎದೆ ಹಾಲು ಉಣಿಸುತ್ತಿದ್ದ ತಾಯಿ ಎಷ್ಟೇ ಚೀರಿದರೂ ಟೋಯಿಂಗ್‌ ಮಾಡಿಕೊಂಡು ಹೊರಟ ಪೊಲೀಸ್‌ ವಾಹನ ನಿಲ್ಲಿಸಲೇ ಇಲ್ಲ. ಸಾರ್ವಜನಿಕರು ಈ ಕುರಿತು ಪ್ರಶ್ನಿಸಿದರೂ ಪೊಲೀಸ್‌ ಪೇದೆ ಮನಸ್ಸು ಕರಗಲೇ ಇಲ್ಲ.

ವಾಹನ ನಿಲುಗಡೆ ನಿಷೇಧಿಸಿರುವ ಜಾಗದಲ್ಲಿ ನಿಲ್ಲಿಸಲಾಗಿದ್ದ ಕಾರನ್ನು ಟೋಯಿಂಗ್‌ ವಾಹನಕ್ಕೆ ಕಟ್ಟಿ ಎಳೆದು ಹೋಗುತ್ತಿದ್ದರು. ಅದೇ ಕಾರಿನ ಹಿಂಬದಿ ಸೀಟ್‌ನಲ್ಲಿ ಮಹಿಳೆ ಮಗುವಿಗೆ ಎದೆ ಹಾಲು ಉಣಿಸುತ್ತಿದ್ದರು. ಆಕೆ ಎಷ್ಟೇ ಜೋರಾಗಿ ಕೂಗಿದರೂ ಟೋಯಿಂಗ್‌ ಟ್ರಕ್‌ನಲ್ಲಿದ್ದ ಪೇದೆ ವಾಹನವನ್ನು ನಿಲ್ಲಿಸದೇ ಸಾಗಿದ್ದರು.

ಮುಂಬೈನ ಮಲಾಡ್‌ ವೆಸ್ಟ್‌ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ ಎನ್ನಲಾಗುವ ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನೆಟಿಜನ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟೋಯಿಂಗ್‌ ಮಾಡುತ್ತಿದ್ದನ್ನು ವಿಡಿಯೊ ಮಾಡುತ್ತಿರುವ ವ್ಯಕ್ತಿ ಪೊಲೀಸ್‌ ಪೇದೆಗೆ ವಾಹನ ನಿಲ್ಲಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗುವುದಿಲ್ಲ. ಮಹಿಳೆ ಮತ್ತು ಮಗು ಇರುವುದನ್ನು ಹೇಳಿದರೂ ಕೇಳದ ‍ಪೇದೆ ಮೊಬೈಲ್‌ ಕರೆಯಲ್ಲಿ ನಿರತರಾಗುತ್ತಾರೆ. ‘ಇದು ಸರಿಯಾದ ಕ್ರಮವಲ್ಲ, ಮುಂಬೈನ ಸಾರ್ವಜನಿಕನಾಗಿ ಕೇಳುತ್ತಿದ್ದೇನೆ, ಮಗುವಿಗೆ ಅಪಾಯವಾದರೆ ಯಾರು ಹೊಣೆ?’ ಎಂದು ಏನೆಲ್ಲ ಹೇಳಿದರೂ ಯಾವುದೇ ಆತ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.

ಕಾರಿನಲ್ಲಿದ್ದ ಮಹಿಳೆ ವಾಹನ ನಿಲ್ಲಿಸುವಂತೆ ಮತ್ತೆ ಮತ್ತೆ ಕೂಗಿ ಅಸಹಾಯಕತೆ ವ್ಯಕ್ತಪಡಿಸುತ್ತಾಳೆ. ‘ವಾಹನ ನಿಲುಗಡೆ ಜಾಗದಲ್ಲಿ ಬಹಳಷ್ಟು ಕಾರುಗಳು ನಿಂತಿದ್ದರೂ ಇದೇ ಕಾರನ್ನು ಎಳೆದು ಹೋಗುತ್ತಿದ್ದಾರೆ. ಎಷ್ಟೇ ಮನವಿ ಮಾಡಿದರೂ ಕೇಳುತ್ತಿಲ್ಲ. ನನಗೆ ಆರೋಗ್ಯ ಸರಿಯಿಲ್ಲ’ ಎಂದು ಚೀಟಿಯನ್ನೂ ತೋರಿಸುವುದು ವಿಡಿಯೊದಲ್ಲಿ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.