ಸೋಮವಾರ, ಮಾರ್ಚ್ 1, 2021
24 °C

ಲಂಡನ್‌: ಟ್ಯಾಗೋರ್‌ ವಾಸವಿದ್ದ ಮನೆ ಖರೀದಿಗೆ ಮುಂದಾದ ಬಂಗಾಳ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌: ಟ್ಯಾಗೋರ್‌ ವಾಸವಿದ್ದ ಮನೆ ಖರೀದಿಗೆ ಮುಂದಾದ ಬಂಗಾಳ ಸರ್ಕಾರ

ಲಂಡನ್‌: ನೊಬೆಲ್‌ ಪುರಸ್ಕೃತ ಸಾಹಿತಿ ರವೀಂದ್ರನಾಥ ಟ್ಯಾಗೋರ್‌ ಅವರು ಲಂಡನ್‌ನಲ್ಲಿ ಕೆಲ ಕಾಲ ವಾಸವಿದ್ದ ಮನೆಯನ್ನು ಖರೀದಿಸಿ ಅದನ್ನು ಸ್ಮಾರಕ ಹಾಗೂ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರ್ಧರಿಸಿದ್ದಾರೆ.

ಬ್ರಿಟನ್‌ಗೆ ಭಾರತದ ಹಂಗಾಮಿ ಹೈಕಮಿಷನರ್‌ ಆಗಿರುವ ದಿನೇಶ್‌ ಪಟ್ನಾಯಕ್‌ ಅವರೊಂದಿಗೆ ಮಮತಾ ಶನಿವಾರ ನಡೆಸಿದ ಸಭೆಯಲ್ಲಿ ಈ ಕುರಿತು ಚರ್ಚಿಸಿದ್ದಾರೆ. ಶನಿವಾರದಿಂದ ಒಂದು ವಾರ ಅವರು ಬ್ರಿಟನ್‌ ಪ್ರವಾಸ ಕೈಗೊಂಡಿದ್ದಾರೆ.

1912ರಲ್ಲಿ ಕೆಲವು ತಿಂಗಳುಗಳ ಕಾಲ ಟ್ಯಾಗೋರ್‌ ಅವರು ಉತ್ತರ ಲಂಡನ್‌ನ ಹ್ಯಾಂಪ್‌ಸ್ಟೆಡ್‌ ಹೀತ್‌ ಎಂಬ ಸ್ಥಳದಲ್ಲಿನ ‘ಹೀತ್‌ ವಿಲ್ಲಾಸ್‌’ನಲ್ಲಿ ವಾಸವಾಗಿದ್ದರು.

ಕೆಲವು ವರ್ಷಗಳ ಹಿಂದೆ ಈ ಮನೆಗೆ ಸುಮಾರು 23 ಕೋಟಿಯಷ್ಟು (27 ಲಕ್ಷ ಬ್ರಿಟನ್‌ ಪೌಂಡ್‌) ಬೆಲೆ ಅಂದಾಜಿಸಲಾಗಿತ್ತು. 2015ರಲ್ಲಿ ಬ್ರಿಟನ್‌ಗೆ ಭೇಟಿ ನೀಡಿದ್ದ ಸಮಯದಲ್ಲೂ ಮಮತಾ ಈ ವಿಷಯವನ್ನು ಅಲ್ಲಿನ ಅಧಿಕಾರಿಗಳ ಮುಂದೆ ಪ್ರಸ್ತಾಪಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.