ಮಂಗಳವಾರ, ಮಾರ್ಚ್ 9, 2021
31 °C
ಪಿಯು ವಿದ್ಯಾರ್ಥಿಗಳ ಕ್ರೀಡಾಕೂಟ: ಆಶಿಶ್ ಬಲೋಥಿಯಾ, ಶಶಿಧರ್, ಉಷಾ ಚಾಂಪಿಯನ್

ದಕ್ಷಿಣ ಕನ್ನಡಕ್ಕೆ ಸಮಗ್ರ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಕ್ಷಿಣ ಕನ್ನಡಕ್ಕೆ ಸಮಗ್ರ ಪ್ರಶಸ್ತಿ

ಬ್ರಹ್ಮಾವರ: ಇಲ್ಲಿನ ಎಸ್‌.ಎಂ.ಎಸ್ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಸೋಮವಾರ ಮುಕ್ತಾಯಗೊಂಡ ಪದವಿಪೂರ್ವ ವಿದ್ಯಾರ್ಥಿಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದರು. ಬೆಂಗಳೂರು ಉತ್ತರದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ತಮ್ಮದಾ ಗಿಸಿಕೊಂಡರು.

ವೈಯಕ್ತಿಕ ಚಾಂಪಿಯನ್‌ ಆಗಿ ಬಾಲಕರ ವಿಭಾಗದಲ್ಲಿ ಆಶಿಶ್‌ ಬಲೋಥಿಯಾ ಮತ್ತು ಶಶಿಧರ್ ಬಿ.ಎಲ್ (ಇಬ್ಬರೂ ದಕ್ಷಿಣ ಕನ್ನಡ), ಬಾಲಕಿಯರ ವಿಭಾಗದಲ್ಲಿ ಉಷಾ ಆರ್ (ಬೆಂಗಳೂರು ಉತ್ತರ) ಹೊರ ಹೊಮ್ಮಿದರು.

ಕೊನೆಯ ದಿನದ ಫಲಿತಾಂಶಗಳು

ಬಾಲಕರ ವಿಭಾಗ:

200 ಮೀ. ಓಟ: ವರುಣ್‌ ಎಸ್ ಅಡಿಗ (ಉಡುಪಿ)–1, ಅಭಿನ್ ದೇವಾಡಿಗ (ಉಡುಪಿ)–2, ನವನೀತ್ ಎಂ(ದಕ್ಷಿಣ ಕನ್ನಡ)–3;

1500 ಮೀ ಓಟ: ಶಶಿಧರ್ ಬಿ.ಎಲ್ (ದಕ್ಷಿಣ ಕನ್ನಡ)-1, ಲಕ್ಷ್ಮಣ (ಬೆಂಗಳೂರು ದಕ್ಷಿಣ)-2, ಎಚ್.ಎಂ.ಸಕ್ರಪ್ಪ (ದಕ್ಷಿಣ ಕನ್ನಡ)-3;

5ಕಿ.ಮೀ ಕ್ರಾಸ್‌ ಕಂಟ್ರಿ ಓಟ: ಅಸ್ಲಾಮ್ ಮುಲ್ತಾನಿ (ಚಿಕ್ಕೋಡಿ)-1, ಮುತ್ತಪ್ಪ ದೊಡ್ಡಪ್ಪ (ಬಾಗಲಕೋಟೆ)-2, ಮಿಲನ್ ಎಂ.ಸಿ -3, ಎಚ್.ಎನ್.ಸಕ್ರೆಪ್ಪ -4, ಬಸವರಾಜು ನೀಲಪ್ಪ (ಮೂವರು ದಕ್ಷಿಣ ಕನ್ನಡ)-5, ಶಿವಾಜಿ ಮಾರಾಡಿ (ಚಿಕ್ಕೋಡಿ)-6;

ಟ್ರಿಪಲ್ ಜಂಪ್‌: ನವೀನ್ ಬಿ.(ಬೆಂಗಳೂರು ಉತ್ತರ) –1, ಪ್ರಮೋದ ಅಂಬಿಗ(ಉತ್ತರ ಕನ್ನಡ)–2, ಕೆಂಗೆತ್ ಎನ್‌.ಅಂಥೋನಿ (ಬೆಂಗಳೂರು ಉತ್ತರ)– 3;

ಡಿಸ್ಕಸ್ ಥ್ರೋ: ಆಶಿಬಾಕಶ್ ಭಾಲೋಥಿಯಾ(ದ.ಕ)-1, ಮಹಮ್ಮದ್ ಸಾಕಾಲಿನ್(ಮೈಸೂರು)-2, ಸಂಜೀವ ಬಿ ಕೊಳವಿ(ಬೆಂಗಳೂರು ದಕ್ಷಿಣ)-3;

4x400 ರಿಲೇ: ದಕ್ಷಿಣ ಕನ್ನಡ– 1, ಉಡುಪಿ– 2, ಬೆಂಗಳೂರು ದಕ್ಷಿಣ– 3.

ಬಾಲಕಿಯರ ವಿಭಾಗ

 200 ಮೀ ಓಟ: ಧನೇಶ್ವರಿ ಅಶೋಕ್ (ಬೆಂಗಳೂರು ಉತ್ತರ)–1, ಜೋಸ್ನಾ (ದಕ್ಷಿಣ ಕನ್ನಡ)–2, ಹರ್ಷಿಣಿ (ಮೈಸೂರು)– 3;

1500 ಮೀ ಓಟ: ಉಷಾ ಆರ್ (ಬೆಂಗಳೂರು ಉತ್ತರ)-1, ಪ್ರಿಯಾ ಎಲ್.ಡಿ (ದಕ್ಷಿಣ ಕನ್ನಡ)-2, ಪಲ್ಲವಿ ಜಿ. ಅಪ್ಪಿನಬಾಳ್ (ಮೈಸೂರು)-3;

3 ಕಿ.ಮೀ ಕ್ರಾಸ್‌ಕಂಟ್ರಿ ಓಟ: ಪ್ರಿಯಾ ಎಲ್.ಡಿ (ದಕ್ಷಿಣ ಕನ್ನಡ)-1, ಹರ್ಷಿತಾ (ಬೆಂಗಳೂರು ಉತ್ತರ)-2, ಮಲ್ಲೇಶ್ವರಿ ಆರ್ ರಾಥೋಡ್ (ಬೆಂಗಳೂರು ಉತ್ತರ)-3; ಅನಿತಾ ಎಂ. ಓಲೇಕಾರ (ಧಾರವಾಡ)-4, ಶ್ರೀನಿಧಿ ಎಸ್. ಸುರ್ಗೋಡ (ಧಾರವಾಡ)-5, ವೈಭವಿ ವಿ. (ಬೆಂಗಳೂರು ಉತ್ತರ)-6;

ಹೈಜಂಪ್‌: ವೀಕ್ಷಾ (ದಕ್ಷಿಣ ಕನ್ನಡ)1, ಕರಿಷ್ಮಾ ಎಸ್. ಸನಿಲ್‌ (ಉಡುಪಿ)2, ದರ್ಷಿಣಿ(ದಕ್ಷಿಣ ಕನ್ನಡ) –3;

ಟ್ರಿಪಲ್ ಜಂಪ್: ಅನಿತಾ ವಿ.ಎಸ್ (ದಕ್ಷಿಣ ಕನ್ನಡ)-1, ಕೆ.ಎಂ.ದೀಪಾಶಿ ಸಿಂಗ್ (ಬೆಂಗಳೂರು ದಕ್ಷಿಣ)-2, ಬಿ.ಎನ್.ತುಂಗಶ್ರೀ(ದಕ್ಷಿಣ ಕನ್ನಡ)-3;

4x400 ರಿಲೇ: ಬೆಂಗಳೂರು ಉತ್ತರ– 1, ದಕ್ಷಿಣ ಕನ್ನಡ– 2, ಮೈಸೂರು– 3.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.