ಮಂಗಳವಾರ, ಮಾರ್ಚ್ 2, 2021
29 °C

ಪ್ರಶ್ನೆಪತ್ರಿಕೆಯಲ್ಲಿ ಲೋಪ: ದೂರು ನೀಡಲು ಅಭ್ಯರ್ಥಿಗಳಿಗೆ 7 ದಿನ ಅವಕಾಶ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಪ್ರಶ್ನೆಪತ್ರಿಕೆಯಲ್ಲಿ ಲೋಪ: ದೂರು ನೀಡಲು ಅಭ್ಯರ್ಥಿಗಳಿಗೆ 7 ದಿನ ಅವಕಾಶ

ನವದೆಹಲಿ: ತಾನು ನಡೆಸುವ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳಲ್ಲಿ ಲೋಪಗಳು ಕಂಡುಬಂದಲ್ಲಿ ಏಳು ದಿನಗಳ ಒಳಗಾಗಿ ಗಮನಕ್ಕೆ ತರಬೇಕು ಎಂದು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಅಭ್ಯರ್ಥಿಗಳಿಗೆ ತಿಳಿಸಿದೆ.

ಏಳು ದಿನಗಳ ನಂತರ ಬಂದ ಯಾವುದೇ ದೂರುಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಆಯೋಗ ಹೇಳಿದೆ.

ನಾಗರಿಕ ಸೇವಾ ಪರೀಕ್ಷೆಗಳೂ ಸೇರಿದಂತೆ ಆಯೋಗವು ನಡೆಸುವ ಹಲವಾರು ನೇಮಕಾತಿ ಪರೀಕ್ಷೆಗಳಿಗೆ ಸಾವಿರಾರು ಅಭ್ಯರ್ಥಿಗಳು ಹಾಜರಾಗುತ್ತಾರೆ.

ಪ್ರತಿ ಪರೀಕ್ಷೆ ನಡೆದ ಮರುದಿನದಿಂದ ಆರು ದಿನಗಳ ಕಾಲಾವಕಾಶ ನೀಡಲಾಗಿದೆ. ಆಯೋಗದ ಅಧಿಕೃತ ಜಾಲತಾಣ examination-upsc@gov.in ಮೂಲಕ ಮಾತ್ರ ದೂರು ಸಲ್ಲಿಸಲು ಅವಕಾಶವಿದೆ. ವ್ಯಕ್ತಿಯು ಖುದ್ದಾಗಿ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.