ಸೋಮವಾರ, ಮಾರ್ಚ್ 8, 2021
30 °C

ಸೆರೆನಾ–ಅಲೆಕ್ಸಿಸ್ ಜೋಡಿಗೆ ಮದುವೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಸೆರೆನಾ–ಅಲೆಕ್ಸಿಸ್ ಜೋಡಿಗೆ ಮದುವೆ

ನ್ಯೂಯಾರ್ಕ್: ಅಮೆರಿಕದ ಖ್ಯಾತ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಹಾಗೂ ರೆಡಿಟ್‌ ಸಂಸ್ಥೆ ಸಹ ಸಂಸ್ಥಾಪಕ ಅಲೆಕ್ಸಿಸ್‌ ಒಹಾನಿಯನ್‌ ಗುರುವಾರ ವಿವಾಹವಾಗಲಿದ್ದಾರೆ.  ಬಹು ಕಾಲದ ಜೋಡಿ ಸೆರೆನಾ ಹಾಗೂ ಅಲೆಕ್ಸಿಸ್‌ ಅವರು ನ್ಯೂ ಒರೆಲನ್ಸ್‌ ನಗರದ ಕಲಾ ಕೇಂದ್ರದಲ್ಲಿ ಮದುವೆಯಾಗಲಿದ್ದಾರೆ.

ಸೆರೆನಾ ಹಾಗೂ ಒಹಾನಿಯನ್ ಜೋಡಿಗೆ ಈಗಾಗಲೇ ಹೆಣ್ಣು ಮಗು ಇದೆ. ಸೆಪ್ಟೆಂಬರ್‌ 1ರಂದು ಜನಿಸಿರುವ ಮಗುವಿಗೆ ಅಲೆಕ್ಸಿಸ್ ಒಲಿಂಪಿಯಾ ಎಂದು ಹೆಸರು ಇಟ್ಟಿದ್ದಾರೆ. ಹೋದ ವರ್ಷ ಡಿಸೆಂಬರ್‌ನಲ್ಲಿ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮದುವೆಗೆ 250 ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ ಎಂದು ‘ಡೇಲಿ ಮೇಲ್’ ಆನ್‌ಲೈನ್ ವರದಿ ಮಾಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.