ಸೋಮವಾರ, ಮಾರ್ಚ್ 1, 2021
29 °C

ಸಮಾಜಶಾಸ್ತ್ರ ವಿಭಾಗದ ‘ಸಹಯೋಗ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಾಜಶಾಸ್ತ್ರ ವಿಭಾಗದ ‘ಸಹಯೋಗ’

ಕಲಬುರ್ಗಿ: ಹೂವಿನ ಕುಂಡಗಳ ಸಾಲು, ಶುಚಿತ್ವದಿಂದ ನಳನಳಿಸುವ ಒಳಆವರಣ. ಗೋಡೆಗಳ ಮೇಲಿನ ಫಲಕಗಳಲ್ಲಿ ಮಾಹಿತಿಯ ಭಂಡಾರ. ಸ್ಮಾರ್ಟ್‌ ಕ್ಲಾಸ್‌, ಕಂಪ್ಯೂಟರ್‌ ರೂಂ, ಪ್ರತ್ಯೇಕ ಗ್ರಂಥಾಲಯ. ವಿದ್ಯಾರ್ಥಿಗಳಿಗೆ ಕುಡಿಯಲು ಶುದ್ಧೀಕರಿಸಿದ ಬಿಸಿ ಮತ್ತು ತಣ್ಣನೆಯ ನೀರಿನ ವ್ಯವಸ್ಥೆ...

ಇಲ್ಲಿಯ ಗುಲಬರ್ಗಾ ವಿಶ್ವವಿದ್ಯಾಲ ಯದ ಸಮಾಜ ವಿಜ್ಞಾನ ವಿಭಾಗಕ್ಕೆ ಕಾಲಿಟ್ಟರೆ ಅಲ್ಲಿಯ ಶೈಕ್ಷಣಿಕ ವಾತಾ ವರಣ ಮನ ಮುದಗೊಳ್ಳುವಂತೆ ಮಾಡುತ್ತದೆ. ‘ಬೋಧಕರ ಕಳಕಳಿ ಮತ್ತು ಹಳೆಯ ವಿದ್ಯಾರ್ಥಿಗಳ ಸಹಭಾಗಿತ್ವದಿಂದ ಒಂದು ವಿಭಾಗವನ್ನು ಹೇಗೆ ಅತ್ಯುತ್ತಮವಾಗಿ ರೂಪಿಸಬಹುದು ಎಂಬುದಕ್ಕೆ ಇದು ನಿದರ್ಶನ’ ಎಂಬ ಮೆಚ್ಚುಗೆ ಮಾತುಗಳೂ ಕೇಳಿಬರುತ್ತವೆ.

ಈ ವಿಭಾಗದ ನೋಂದಾಯಿತ ಹಳೆಯ ವಿದ್ಯಾರ್ಥಿಗಳ ಸಂಘ ಕ್ರಿಯಾಶೀಲವಾಗಿದೆ. ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ನೆರವಿನಿಂದ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಸ್ಮಾರ್ಟ್‌ ಬೋರ್ಡ್‌ ನೀಡಿದೆ. ಹಳೆಯ ವಿದ್ಯಾರ್ಥಿಗಳಿಂದ ಪೋಡಿಯಂ, ಡಯಾಸ್‌ ಮತ್ತಿತರ ಉಪಕರಣ ಪಡೆದುಕೊಂಡು ಅತ್ಯುತ್ತಮ ‘ಉಪನ್ಯಾಸ ಕೋಣೆ’ ಸಿದ್ಧಪಡಿಸಲಾಗಿದೆ.

‘ನಾವು ಹಳೆಯ ವಿದ್ಯಾರ್ಥಿಗಳಿಂದ ಹಣ ಕೇಳುವುದಿಲ್ಲ. ಅವಶ್ಯವಿರುವ ವಸ್ತುಗಳ ಬಗ್ಗೆ ಅವರಿಗೆ ತಿಳಿಸುತ್ತೇವೆ. ಅವರು ಖರೀದಿಸಿ ಕೊಡುತ್ತಾರೆ. ಫ್ರಿಜ್‌, ಅಲ್ಮೇರಾ, ಪೋಡಿಯಂ ಡಯಾಸ್‌ ಹೀಗೆ ಹಲವಾರು ಉಪಕರಣ ನೀಡಿದ್ದಾರೆ.

ವಿಭಾಗದಲ್ಲಿ ಸಭೆ–ಸಮಾರಂಭ ನಡೆದರೆ ವಿದ್ಯಾರ್ಥಿಗಳಿಗೆ ಚಹಾದ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ವೆಚ್ಚವನ್ನು ಹಳೆಯ ವಿದ್ಯಾರ್ಥಿ ಸಂಘದಿಂದ ಭರಿಸಲಾಗುತ್ತಿದೆ’ ಎನ್ನುತ್ತಾರೆ ಈ ವಿಭಾಗದ ಮುಖ್ಯಸ್ಥ ಪ್ರೊ.ಶಿಂಧೆ ಜಗನ್ನಾಥ ಆರ್‌.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.