7

ಕೊಡವ ಆಹಾರ ಖಾದ್ಯ

Published:
Updated:
ಕೊಡವ ಆಹಾರ ಖಾದ್ಯ

ಹಂದಿ ಸುಕ್ಕಾ

ಬೇಕಾಗುವ ಸಾಮಾಗ್ರಿಗಳು:
500 ಗ್ರಾಂ ಹಂದಿ ಮಾಂಸ, ಬೆಳ್ಳುಳ್ಳಿ ಎಸಳು 100 ಗ್ರಾಂ, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ 100 ಗ್ರಾಂ, ಅರಿಶಿಣ ಪುಡಿ10 ಗ್ರಾಂ, ಗರಂ ಮಸಾಲ 30 ಗ್ರಾಂ, ಮೆಣಸಿನಕಾಯಿ ಪುಡಿ 30 ಗ್ರಾಂ, ಹಸಿಮೆಣಸಿನಕಾಯಿ –2, ಕೂಡುಂಪುಳಿ 20 ಗ್ರಾಂ ಅಥವ ಹುಣಸೆಹಣ್ಣಿನ ರಸ 20 ಗ್ರಾಂ.

ಮಾಡುವ ವಿಧಾನ: ಪಾತ್ರೆಯಲ್ಲಿ ಹಸಿಮೆಣಸಿನಕಾಯಿ ತುಂಡು, ಹಂದಿ ಮಾಂಸ, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌, ಅರಿಶಿಣ, ಗರಂ ಮಸಾಲ, ಮೆಣಸಿನಕಾಯಿ ಪುಡಿ, ಉಪ್ಪು ಸೇರಿಸಿ ಹುರಿಯಿರಿ. ನಂತರ ಒಂದು ಗಂಟೆ ಬೇಯಲು ಬಿಡಿ, ನಂತರ ಮತ್ತೊಂದು ಪಾತ್ರೆಯಲ್ಲಿ ಕಾಳುಮೆಣಸಿನ ಪುಡಿಯೊಂದಿಗೆ ಬೆಳ್ಳುಳ್ಳಿ ತುಂಡುಗಳನ್ನು ಹುರಿದುಕೊಳ್ಳಿ. ಈ ಮಿಶ್ರಣ ಕಂದು ಬಣ್ಣವಾದ ಮೇಲೆ ಹುರಿದು ಇಟ್ಟುಕೊಂಡ ಮಾಂಸ ಸೇರಿಸಿ. ಕೊನೆಯಲ್ಲಿ ಹುಳಿ ಹಾಕಿ ಕೈಯಾಡಿಸಿ.

**

ಕೋಝಿ ಫ್ರೈ

ಬೇಕಾಗುವ ಸಾಮಾಗ್ರಿಗಳು: ಕೋಳಿ ಮಾಂಸ 500 ಗ್ರಾಂ, ಜೋಳದ ಹಿಟ್ಟು 200 ಗ್ರಾಂ, ಅಕ್ಕಿ ಹಿಟ್ಟು 150 ಗ್ರಾಂ, ಮೆಣಸಿನಕಾಯಿ ಪುಡಿ 750 ಗ್ರಾಂ, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ 15 ಗ್ರಾಂ, ನಿಂಬೆ ರಸ, ಕರಿಬೇವು, ಮೊಟ್ಟೆ

ಮಾಡುವ ವಿಧಾನ: ಜೋಳದ ಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನಕಾಯಿ ಪುಡಿ, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌, ನಿಂಬೆ ರಸ, ಕತ್ತರಿಸಿದ ಕರಿಬೇವು, ಮೊಟ್ಟೆ ಹಾಕಿ ಮಿಶ್ರಣ ಮಾಡಿಕೊಳ್ಳಿ. ಈ ಹಿಟ್ಟಿನಲ್ಲಿ ಕೋಳಿ ತುಂಡುಗಳನ್ನು ಅಡ್ಡಿ ಎಣ್ಣೆಯಲ್ಲಿ ಕರಿಯಿರಿ.

**

ಕಾಫಿ ಡ್ರಂಕನ್ ಗ್ರಿಲ್ ಚಿಕನ್ ಹಂದಿ ಸುಕ್ಕಾ

ಬೇಕಾಗುವ ಸಾಮಾಗ್ರಿಗಳು: ಕೋಳಿ ಕಾಲು– ಕೆ.ಜಿ. (ಮೂಳೆ ಚರ್ಮ ಸಮೇತ), ಬಿಯರ್ 330 ಎಂಎಲ್, ಆಲಿವ್ ಎಣ್ಣೆ 80 ಎಂಎಲ್, ಕಾಫಿ ಬೀಜದ ರಸ 50 ಎಂಎಲ್, ವೆನಿಗರ್ 20 ಎಂಎಲ್, ಸೋಯಾ ಸಾಸ್ 20 ಎಂಎಲ್, ಬ್ರೌನ್ ಸೆಕ್ಕರೆ ಅಥವ ಜೇನು 25 ಗ್ರಾಂ, ಕಾಳುಮೆಣಸು (ಹಸಿಯದ್ದು) 25 ಗ್ರಾಂ, ಬೆಳ್ಳುಳ್ಳಿ ಪುಡಿ 40 ಗ್ರಾಂ,  ಈರುಳ್ಳಿ ಪುಡಿ 40 ಗ್ರಾಂ, ಉಪ್ಪು, ನಿಂಬೆ ಹಣ್ಣಿನ ರಸ, ಕಾಫಿಪುಡಿ– 1 ಚಮಚ

ಮಾಡುವ ವಿಧಾನ: ಬಿಯರ್‌ನಲ್ಲಿ ಕೋಳಿ ಮಾಂಸವನ್ನು ಒಂದು ರಾತ್ರಿ ನೆನೆಸಿಡಿ. ನಂತರ ಈ ಮಾಂಸಕ್ಕೆ ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಮಿಶ್ರಣ ಮಾಡಿ ಗ್ರಿಲ್ ಮಾಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry