ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಾ‍ಪಸಿಂಹ ವಿರುದ್ಧ ಚಂಪಾ ಅಸಮಾಧಾನ

Last Updated 27 ನವೆಂಬರ್ 2017, 5:19 IST
ಅಕ್ಷರ ಗಾತ್ರ

ಮೈಸೂರು: ಟಿಪ್ಪುವನ್ನು ಬೆಂಬಲಿಸಿ ರಾಷ್ಟ್ರಪತಿ ಅವರು ಮಾಡಿದ ಭಾಷಣ ಮಾಡಿದ್ದಕ್ಕೆ ಸಂಸದ ಪ್ರತಾಪಸಿಂಹ ಟ್ವೀಟ್ ಮಾಡಿದ್ದು ತಪ್ಪು ಎಂದು ಅವರಿಗೆ ಹೇಳೋಣ ಎಂದುಕೊಂಡಿದ್ದೆ. ಆದರೆ, ಬಸವನ ಹಿಂದೆ ಬಾಲ ಹಿಡಿದು ಹೋದಂತೆ ಅವರು ಸಚಿವ ಅನಂತಕುಮಾರ್ ಹಿಂದೆ ಹೋದರು ಎಂದು ಸಾಹಿತಿ ಚಂದ್ರಶೇಖರ ಪಾಟೀಲ ವ್ಯಂಗ್ಯವಾಡಿದರು.

ಅನಂತಕುಮಾರ್‌ ಅವರಿಗೆ ಏನೇನೋ ಕೆಲಸದ ಒತ್ತಡ ಇದ್ದಿರಬಹುದು. ಅವರು ಹೋದರು. ಈ ಭಾಗದ ಸಂಸದರಾಗಿ ಪ್ರತಾಪಸಿಂಹ ಇರಬೇಕಿತ್ತು. ರಾಷ್ಟ್ರಪತಿ ಭಾಷಣಕ್ಕೆ ಅವರು ಯಾವ ಪಕ್ಷದಿಂದ ಆಯ್ಕೆಯಾದರೋ ಆ ಪಕ್ಷದವರೆ ಸುಮ್ಮನಿದ್ದರು. ಪ್ರತಾಪಸಿಂಹ ಟ್ವೀಟ್ ಮಾಡಿದ್ದು ತಪ್ಪು ಎಂದು ಟೀಕಿಸಿದರು.

ಸಮ್ಮೇಳನದ ಅಧ್ಯಕ್ಷರಾದವರು ಮುಂದಿನ ಸಮ್ಮೇಳನದವರೆಗೂ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿರುವಂತೆ ಮಾಡಲು ಸೂಕ್ತ ನಿಯಮಾವಳಿ ರೂಪಿಸಬೇಕು ಎಂದು ಸಲಹೆ ನೀಡಿದರು.

‘ನಾನು ಮಾತ್ರ ಮಾತನಾಡಬೇಕು. ಉಳಿದವರು ಸುಮ್ಮನಿರಬೇಕು ಎಂದು ಹೇಳುವುದು ವರ್ತಮಾನದ ದುರಂತ. ಸಚಿವ ಅನಂತಕುಮಾರ್ ಮಾತನಾಡಿದ್ದು ರಾಜಕೀಯವನ್ನೇ. ಅವರು ಮಾತ್ರ ಮಾತನಾಡಬಹುದು. ನಾವು ಮಾತನಾಡಿದರೆ ತಪ್ಪು ಎನ್ನುವುದು ಸರಿಯಲ್ಲ’ ಎಂದು ಕಿಡಿಕಾರಿದರು.

ಅನಂತಕುಮಾರ್ ಅವರ ಕನ್ನಡಪರ ಕಾಳಜಿಗೆ ಅಪಾರ ಗೌರವ, ಪ್ರೀತಿ ಇದೆ. ಆದರೆ, ಅವರ ಭಾಷಣದಲ್ಲಿನ ಅಸಹನೆಯನ್ನು ಸ್ವೀಕರಿಸಲಾಗದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT