7

ತಲ್ಲೂರು ಕೆರೆ: ಯಶ್‌ ಬಾಗಿನ ಇಂದು

Published:
Updated:
ತಲ್ಲೂರು ಕೆರೆ: ಯಶ್‌ ಬಾಗಿನ ಇಂದು

ಯಲಬುರ್ಗಾ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ತಲ್ಲೂರು ಕೆರೆ ಸಂಪೂರ್ಣ ಭರ್ತಿಯಾಗಿದ್ದು, ಚಿತ್ರನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್‌ ದಂಪತಿ ನ.27ರಂದು ಬೆಳಿಗ್ಗೆ 10.30ಕ್ಕೆ ಬಾಗಿನ ಅರ್ಪಿಸಲಿದ್ದಾರೆ.

‘ಸುಮಾರು 96 ಎಕರೆ ವಿಸ್ತೀರ್ಣದ ಕೆರೆಯ ಅಭಿವೃದ್ಧಿಗೆ ಫೆ.28ರಂದು ಚಾಲನೆ ನೀಡಿದ್ದ ಯಶ್ ದಂಪತಿ ₹70 ಲಕ್ಷ ವೆಚ್ಚದಲ್ಲಿ ಹೂಳೆತ್ತುವ ಕೆಲಸ ಮಾಡಿಸಿದ್ದರು. ಇದರ ಪರಿಣಾಮ ಸುತ್ತಲಿನ ಹತ್ತಾರು ಹಳ್ಳಿಗಳ ಕೊಳೆವೆಬಾವಿಗಳ ಅಂತರ್ಜಲ ಹೆಚ್ಚಾಗಿದೆ.

ಈಗ ಕೆರೆಯ ಅಂಗಳದಲ್ಲಿ ಪಕ್ಷಿಗಳ ಕಲರವ ಶುರುವಾಗಿದೆ. ಕೆರೆ ವೀಕ್ಷಿಸಲು ಸಾಕಷ್ಟು ಜನರು ಬರುತ್ತಿದ್ದಾರೆ’ ಎಂದು ಪ್ರಗತಿಪರ ರೈತ ರಮೇಶ ಬಳೂಟಗಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry