5

‘ಧರ್ಮ ಒಡೆಯುವವರಿಗೆ ತಿರುಗು ಬಾಣ’

Published:
Updated:

ಲಕ್ಷ್ಮೇಶ್ವರ: ‘ಒಗ್ಗಟ್ಟಾಗಿರುವ ಯಾವುದೇ ಧರ್ಮವನ್ನು ಒಡೆದು ಹಾಳು ಮಾಡಲು ಹೊರಟವರಿಗೆ ಮುಂದೊಂದು ದಿನ ಅದೇ ತಿರುಗು ಬಾಣ ಆಗುತ್ತದೆ. ದೊಡ್ಡ ದೊಡ್ಡ ಮಠಗಳಲ್ಲಿ ಕುಳಿತು ಧರ್ಮವನ್ನು ಒಡೆಯುವವರು ದಡ್ಡ ಸ್ವಾಮಿಗಳು’ ಎಂದು ಬಾಲೆಹೊಸೂರು ದಿಂಗಾಲೇಶ್ವರಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಡಿ.24ರಂದು ಗದಗನಲ್ಲಿ ನಡೆ ಯಲಿರುವ ವೀರಶೈವ–ಲಿಂಗಾಯತ ಸಮನ್ವಯ ಸಮಾವೇಶದ ಪೂರ್ವಭಾವಿ ಯಾಗಿ ಇಲ್ಲಿನ ವೀರಗಂಗಾಧರ ಸಮುದಾಯ ಭವನದಲ್ಲಿ ಸೋಮವಾರ ನಡದ ಸಭೆಯಲ್ಲಿ ಅವರು ಮಾತನಾಡಿದರು.

‘ಸಾವಿರಾರು ವರ್ಷಗಳಿಂದ ಒಂದಾಗಿದ್ದ ವೀರಶೈವ–ಲಿಂಗಾಯತ ಧರ್ಮವನ್ನು, ಪ್ರತ್ಯೇಕ ಧರ್ಮದ ವಿಷಯ ಮುಂದಿಟ್ಟುಕೊಂಡು ಸರ್ಕಾರ ಒಡೆಯುವ ಸಾಹಸಕ್ಕೆ ಕೈ ಹಾಕಿದೆ. ಆದರೆ ಮುಂದಿನ ದಿನಗಳಲ್ಲಿ ಅದರ ಫಲವನ್ನು ಅನುಭವಿಸಲಿದೆ’ ಎಂದರು.

‘ಸಮಾಜ ಬಾಂಧವರು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ ಡಿ.24ರಂದು ಗದಗನಲ್ಲಿ ನಡೆಯಲಿರುವ ವೀರಶೈವ–ಲಿಂಗಾಯತ ಸಮನ್ವಯ ಸಮಾವೇಶದಲ್ಲಿ ಭಾಗವಹಿಸಬೇಕು’ ಎಂದರು. ಮಾಜಿ ಶಾಸಕ ಜಿ.ಎಂ. ಮಹಾಂತ ಶೆಟ್ಟರ ಮಾತನಾಡಿ ‘ ಡಿ.4ರಂದು ಮೊತ್ತೊಮ್ಮೆ ಇದೇ ಸಮುದಾಯ ಭವನ ದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ’ ಎಂದರು.

ಹುಲ್ಲತ್ತಿಯ ಸ್ವಾಮೀಜಿ, ಸೋಮಣ್ಣ ಮುಳಗುಂದ, ಎ.ಪಿ.ಎಂ.ಸಿ ಅಧ್ಯಕ್ಷ ಎಸ್‌.ಪಿ. ಪಾಟೀಲ, ದೇವಣ್ಣ ಬಳಿಗಾರ, ಶಿವಣ್ಣ ಬಳಿಗಾರ, ಸಿ.ಆರ್‌. ಲಕ್ಕುಂಡಿಮಠ, ರೇವಣಸಿದ್ಧಯ್ಯ ಬಾಳಿಹಳ್ಳಿಮಠ, ಮಹೇಶ ಹೊಗೆಸೊಪ್ಪಿನ, ಎಸ್‌.ಬಿ. ಸೊರಟೂರ, ವೀರಯ್ಯ ಕಳ್ಳಿಮಠ, ಚೆನ್ನಪ್ಪ ಜಗಲಿ, ಸುರೇಶ ರಾಚನಾಯ್ಕರ್‌, ನಾಗಯ್ಯ ಮಠಪತಿ, ಎಂ.ಸಿದ್ಧಲಿಂಗಯ್ಯ, ಸಿದ್ಧಲಿಂಗಯ್ಯ ಪಶುಪತಿಮಠ, ಜಿ.ಎಫ್‌. ಘಂಟಾಮಠ, ಬಸವರಾಜ ನೀಲಣ್ಣವರ ಇದ್ದರು.

ಸಮಿತಿ ರಚನೆ: ಗದಗನಲ್ಲಿ ನಡೆ ಯಲಿರುವ ಸಮಾವೇಶವನ್ನು ಯಶಸ್ವಿ ಗೊಳಿಸುವ ನಿಟ್ಟಿನಲ್ಲಿ ಶಿರಹಟ್ಟಿ ತಾಲ್ಲೂಕಿ ನ ವೀರಶೈವ–ಲಿಂಗಾಯತ ಸಮಾವೇಶ ಸಮಿತಿ ರಚಿಸಲಾಗಿದೆ. ಸಮಿತಿ ಅಧ್ಯಕ್ಷ ರಾಗಿ ಮಾಜಿ ಶಾಸಕ ಜಿ.ಎಂ. ಮಹಾಂತ ಶೆಟ್ಟರ, ಗೌರವಾಧ್ಯಕ್ಷರಾಗಿ ಮಾಜಿ ಶಾಸಕ ಜಿ.ಎಸ್‌. ಗಡ್ಡದೇವರಮಠ, ಕಾರ್ಯ ದರ್ಶಿಗಳಾಗಿ ಮಹೇಶ ಹೊಗೆಸೊಪ್ಪಿನ ನೇಮಕಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry