ಶುಕ್ರವಾರ, ಫೆಬ್ರವರಿ 26, 2021
27 °C

ಚಿದಂಬರಂ ಆಪ್ತರ ಮನೆ ಮೇಲೆ ಇ.ಡಿ ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

ಚಿದಂಬರಂ ಆಪ್ತರ ಮನೆ ಮೇಲೆ ಇ.ಡಿ ದಾಳಿ

ನವದೆಹಲಿ : ಏರ್‌ಸೆಲ್‌–ಮ್ಯಾಕ್ಸಿಸ್‌ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಹಣಕಾಸು  ಸಚಿವ ಪಿ.ಚಿದಂಬರಂ ಸಂಬಂಧಿಗಳ ಮತ್ತು ಆಪ್ತರ ಮನೆಗಳ ಮೇಲೆ ಜಾರಿನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚೆನ್ನೈನ ನಾಲ್ಕು ಹಾಗೂ ಕೋಲ್ಕತ್ತದ ಎರಡು ನಿವಾಸಗಳ ಮೇಲೆ ದಾಳಿ ನಡೆದಿದೆ.

ಚೆನ್ನೈನ ತೆನಾಯಂಪೇಟ್‌ನಲ್ಲಿರುವ ಕಾರ್ತಿ ಚಿದಂಬರಂ ಅವರ ಸೋದರಮಾವ ಎಸ್‌.ಕೈಲಾಸಂ ನಿವಾಸ ಹಾಗೂ ಕುಟುಂಬದ ಆಪ್ತರಾದ ಎಸ್‌.ಸಾಂಬಮೂರ್ತಿ, ರಾಮ್ಜಿ ನಟರಾಜನ್‌ ನಿವಾಸದ ಮೇಲೂ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅದೇ ರೀತಿ ಕೋಲ್ಕತ್ತದಲ್ಲಿ ಮನೋಜ್‌ ಮೋಹಂಕರಿಗೆ ಸೇರಿದ ಲೀ ರೋಡ್‌ ಹಾಗೂ ಲೌಲಾಕ್‌ ಪ್ರದೇಶದಲ್ಲಿರುವ ಕಚೇರಿಗಳ ಮೇಲೂ ದಾಳಿ ನಡೆಸಲಾಗಿದೆ.

2006ರಲ್ಲಿ  ಪಿ.ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದ ವೇಳೆ ವಿದೇಶಿ ಹೂಡಿಕೆ ಪ್ರವರ್ತನೆ ಮಂಡಳಿಯು (ಎಫ್‌ಐಪಿಬಿ) ಏರ್‌ಸೆಲ್‌–ಮ್ಯಾಕ್ಸಿಸ್‌ಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಇ.ಡಿ ಈ ದಾಳಿ ನಡೆಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.