ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಖಿ’ ಚಂಡಮಾರುತ: ಕೇರಳ ಕಡಲತೀರದಲ್ಲಿ 200ಕ್ಕೂ ಹೆಚ್ಚು ಮೀನುಗಾರರ ರಕ್ಷಣೆ

Last Updated 2 ಡಿಸೆಂಬರ್ 2017, 11:19 IST
ಅಕ್ಷರ ಗಾತ್ರ

ಕೇರಳ: ‘ಒಖಿ’ ಚಂಡಮಾರುತದಿಂದ ಕೇರಳದ ಕಡಲತೀರದಲ್ಲಿ ಅಪಾಯದಲ್ಲಿ ಸಿಲುಕಿದ್ದ 200ಕ್ಕೂ ಹೆಚ್ಚು ಮೀನುಗಾರರನ್ನು ಭಾರತೀಯ ವಾಯುಪಡೆ ಹಾಗೂ ನೌಕಾಪಡೆ, ಕರಾವಳಿ ಪಡೆಗಳು ರಕ್ಷಿಸಿವೆ. ಶುಕ್ರವಾರ ಸಂಜೆ ಮತ್ತು ರಾತ್ರಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಶನಿವಾರವೂ ರಕ್ಷಣಾ ಕಾರ್ಯ ಮುಂದುವರೆದಿದೆ.

ಚಂಡಮಾರುತದ ಪ್ರಭಾವ ಭಾನುವಾರ ಸಂಜೆಯ ವೇಳೆಗೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ನಿರ್ದೇಶಕ ಕೆ.ಜೆ. ರಮೇಶ್ ತಿಳಿಸಿದ್ದಾರೆ.

ಕೇರಳದ ಕಡಲತೀರದಲ್ಲಿ ಭಾರತೀಯ ನೌಕಪಡೆ ಮತ್ತು ವಾಯುಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ 200ಕ್ಕೂ ಹೆಚ್ಚು ಮೀನುಗಾರರನ್ನು ರಕ್ಷಿಸಿವೆ.  ಶನಿವಾರ(ಡಿ.2) ಸಂಜೆ 6.30ರಿಂದ ರಾತ್ರಿ 10ರವರೆಗೂ 3ರಿಂದ 4.9 ಮೀಟರ್‌ ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುಸ್ಸೂಚನೆ ನೀಡಿದೆ.

ಕೇರಳ ಸರ್ಕಾರ ಕರಾವಳಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದು, ಮೀನುಗಾರರು ಹಾಗೂ ಸಾರ್ವಜನಿಕರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT