3

ಕೋಟೆ ಆಂಜನೇಯಸ್ವಾಮಿ ರಥೋತ್ಸವ

Published:
Updated:
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಬಳ್ಳಾರಿ: ಹನುಮದ್‌ ವ್ರತದ ಅಂಗವಾಗಿ ನಗರದ ಹನುಮನ ಗುಡಿಗಳಲ್ಲಿ ಶುಕ್ರವಾರ ನಡೆದ ವಿಶೇಷ ಪೂಜೆ, ಭಜನೆ, ರಥೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡು ಹರಕೆ ತೀರಿಸಿದರು.

ನಗರದ ಕೋಟೆ ಆಂಜನೇಯ ಗುಡಿಯಲ್ಲಿ ಹನುಮ, ರಾಮ–ಲಕ್ಷ್ಮಣ–ಸೀತೆ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ ನಡೆದ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರು ದಾರಿಯುದ್ದಕ್ಕೂ ಭಜನೆ ಮಾಡುತ್ತಾ, ಕುಣಿಯುತ್ತಾ ಸಾಗಿದ್ದು ಗಮನ ಸೆಳೆಯಿತು.

ದೇವಾಲಯದಿಂದ ಹೊರಟ ರಥವು, ಕೋಟೆ ರಸ್ತೆ, ಅಂಚೆ ಕಚೇರಿ ರಸ್ತೆ, ಕೌಲ್‌ಬಜಾರ್‌ ಮೊದಲನೇ ಗೇಟ್‌, ಏಳು ಮಕ್ಕಳ ತಾಯಿ ದೇವಾಲಯದ ಮೂಲಕ ಮತ್ತೆ ಕೋಟೆ ದೇವಾಲಯವನ್ನು ಸೇರಿತು.

ಭಜನೆ: ನಗರದ ಬೆಂಗಳೂರು ರಸ್ತೆಯ ಬಾಲಾಂಜನೇಯ ಗುಡಿಯಲ್ಲಿ ನಡೆದ ಭಜನೆ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry