ಮಂಡ್ಯದಲ್ಲಿ ರಮ್ಯಾ ಕ್ಯಾಂಟೀನ್ ಆರಂಭ

ಮಂಡ್ಯ: ಇಲ್ಲಿನ ಅಶೋಕನಗರದಲ್ಲಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಬಳಿ ನೂತನವಾಗಿ ರಮ್ಯಾ ಕ್ಯಾಂಟೀನ್ ಆರಂಭಿಸಲಾಗಿದ್ದು, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಅವರು ಭಾನುವಾರ ಉದ್ಘಾಟಿಸಿದರು.
ಮಾಜಿ ಸಂಸದೆ ರಮ್ಯಾ ಬೆಂಬಲಿಗರಾದ ರಘು ಈ ಕ್ಯಾಂಟೀನ್ ತೆರೆದಿದ್ದಾರೆ. ಯಾವುದೇ ತಿಂಡಿ, ಊಟಕ್ಕೆ ₹ 10 ದರ ನಿಗದಿಪಡಿಸಲಾಗಿದೆ.
ಇತರೆ ಕ್ಯಾಂಟೀನ್‌ಗಳಿಗಿಂತ ಇದು ಭಿನ್ನವಾಗಿದೆ. ಕುಡಿಯಲು ಬಿಸಿನೀರು ಕೊಡಲಾಗುವುದು. ತಿಂಡಿ ಹಾಗೂ ಊಟದ ಪಾರ್ಸೆಲ್ ತೆಗೆದುಕೊಂಡರೆ ಹೆಚ್ಚುವರಿಯಾಗಿ ಹಣ ತೆಗೆದುಕೊಳ್ಳುವುದಿಲ್ಲ.
ಬೆಳಗಿನ ತಿಂಡಿಯಲ್ಲಿ ಮಸಾಲೆ ದೋಸೆ, ಪ್ಲೇನ್ ದೋಸೆ, ಈರುಳ್ಳಿ ದೋಸೆ, ಸೆಟ್ ದೋಸೆ, ಇಡ್ಲಿ, ಮಸಾಲೆ ವಡೆ, ರೈಸ್ ಬಾತ್, ಪೂರಿ, ಉದ್ದಿನ ವಡೆ, ಚಪಾತಿ, ಚಿತ್ರಾನ್ನ ಲಭ್ಯವಿದೆ.
ಮಧ್ಯಾಹ್ನದ ಊಟಕ್ಕೆ ಚಪಾತಿ, ಮುದ್ದೆ, ಅನ್ನ ಸಾಂಬಾರು, ತಿಳಿಸಾಂಬಾರು ಅನ್ನ, ಮೊಸರನ್ನ, ರವೆಗಂಜಿ ದೊರೆಯುತ್ತದೆ.
ಮೊದಲ ದಿನದಂದು ಎಲ್ಲರಿಗೂ ಉಚಿತವಾಗಿ ತಿಂಡಿ ನೀಡಲಾಯಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.