ಮದುವೆ ಬಂಧನದಿಂದ ಮುಕ್ತಿ ನೀಡಿದ ಆ್ಯಪ್!

ಪಟ್ನಾ: ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ (ಯುಎನ್‌ಎಫ್‌ಪಿಎ) ಸಹಯೋಗದೊಂದಿಗೆ ಪಟ್ನಾ ಮೂಲದ ‘ಜಂಡರ್ ಅಲಯನ್ಸ್’ ಸಂಸ್ಥೆ ಅಭಿವೃದ್ಧಿಪಡಿಸಿರುವ ಆ್ಯಂಡ್ರಾಯ್ಡ್ ಆ್ಯಪ್ ಶಾಲಾ ಬಾಲಕಿಯೊಬ್ಬಳನ್ನು ಬಾಲ್ಯವಿವಾಹದಿಂದ ಪಾರುಮಾಡಿದೆ.
‘ದರ್ಭಂಗ ಜಿಲ್ಲೆಯ ಬೇನಿಪುರ ಘಟಕದ 13 ವರ್ಷದ ಬಾಲಕಿ, ಮನೆಯವರು ತನಗೆ ಮದುವೆ ಮಾಡಲು ಹೊರಟಿದ್ದರಿಂದ ತೀವ್ರ ಹತಾಶಳಾಗಿದ್ದಳು. ನವೆಂಬರ್ ಕೊನೆಯ ವಾರ ಆಕೆ ‘ಬಂಧನ್ ತೋಡ್’ ಆ್ಯಪ್‌ನಲ್ಲಿ ತನ್ನ ನೋವನ್ನು ಹಂಚಿಕೊಂಡಿದ್ದಳು. ನಾಗರಿಕರ ಮೂಲಕ ಈ ದೂರನ್ನು ಪರಿಶೀಲಿಸಿದ ಬಳಿಕ ಕೂಡಲೇ ನಾವು ಪಟ್ನಾದ ಡಿಜಿಪಿಯನ್ನು ಭೇಟಿ ಮಾಡಿದೆವು. ಅವರು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ ಅಗತ್ಯ ಕ್ರಮ ಕೈಗೊಂಡರು’ ಎಂದು ಹೆಸರು ಹೇಳಲಿಚ್ಛಿಸದ ‘ಜಂಡರ್ ಅಲಯನ್ಸ್’ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಬಾಲಕಿಯನ್ನು ಮದುವೆಯಾಗಲಿದ್ದ ಹುಡುಗನೂ ಅಪ್ರಾಪ್ತನಾಗಿದ್ದು ಅವನ ವಯಸ್ಸು 15. ಆ್ಯಪ್‌ಗೆ ಸಂದೇಶ ಬರದೇ ಇದ್ದಲ್ಲಿ ಇಬ್ಬರೂ ಬಾಲ್ಯವಿವಾಹಕ್ಕೆ ಗುರಿಯಾಗುತ್ತಿದ್ದರು’ ಎಂದು ಅವರು ಹೇಳಿದರು.
ವರದಕ್ಷಿಣೆ, ಬಾಲ್ಯವಿವಾಹ, ಕೌಟುಂಬಿಕ ದೌರ್ಜನ್ಯ ಮತ್ತು ಲೈಂಗಿಕ ಅಸಮಾನತೆಯ ವಿರುದ್ಧ ರಾಜ್ಯದ ಜನರಲ್ಲಿ ಜಾಗೃತಿ ಮೂಡಿಸಲು ಕಳೆದ ಸೆಪ್ಟೆಂಬರ್‌ನಲ್ಲಿ ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.