ಸೋಮವಾರ, ಮಾರ್ಚ್ 1, 2021
29 °C

‘ರಾಹುಲ್‌ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್‌ ಗೆ ಸೇರ್ಪಡೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರಾಹುಲ್‌ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್‌ ಗೆ ಸೇರ್ಪಡೆ’

ಮಂಡ್ಯ: ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದೇನೆ ಎಂದು ಶಾಸಕ ಎನ್‌.ಚಲುವರಾಯಸ್ವಾಮಿ ಹೇಳಿದರು.

ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಸೇರ್ಪಡೆ ಕಾರ್ಯಕ್ರಮ ಜ.21ರಂದು ನಡೆಯಬಹುದು ಎಂದುಕೊಂಡಿದ್ದೇವೆ. ಇನ್ನೂ ಅಧಿಕೃತವಾಗಿ ದಿನ ನಿಗದಿಗೊಳಿಸಿಲ್ಲ. ಶೀಘ್ರ ನಿರ್ಧರಿಸಲಿದ್ದೇವೆ’ ಎಂದರು.

ಅಪರೇಷನ್‌ ಕಮಲದಲ್ಲಿ ಸಿದ್ದರಾಮಯ್ಯ ಅವರ ಪಾತ್ರವೂ ಇದೆ ಎಂದು ಕುಮಾರಸ್ವಾಮಿ ಆರೋಪ ಮಾಡುತ್ತಾರೆ, ಆದರೆ, ಕಾಂಗ್ರೆಸ್‌ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರನ್ನು ಜೆಡಿಎಸ್‌ಗೆ ಕರೆ ತಂದವರು ಯಾರು?’ ಎಂದು ಪ್ರಶ್ನಿಸಿದರು.

ಪ್ರಜಾಪ್ರಭುತ್ವದಲ್ಲಿ ಪಕ್ಷ ಬಿಡುವುದು, ಸೇರ್ಪಡ, ಪಕ್ಷಾಂತರ ಸಾಮಾನ್ಯ. ಒಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದವರು ಪಕ್ಷದ ಸಾಧನೆ ಆಧರಿಸಿ ಚುನಾವಣೆ ಎದುರಿಸಬೇಕು. ವೈಯಕ್ತಿಕ, ಅನ್ಯ ಪಕ್ಷದ ನಡವಳಿಕೆ ಬಗ್ಗೆ ಟೀಕೆ ಮಾಡುವುದು ಸಮಂಜಸವಲ್ಲ ಎಂದು ಟೀಕಿಸಿದರು. ಶಾಸಕ ಜಮೀರ್ ಅಹಮ್ಮದ್, ’ಕುಮಾರಸ್ವಾಮಿ ಅವರು ಮೊದಲು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮುಸ್ಲಿಂ ಅಥವಾ ದಲಿತ

ರನ್ನು ನೇಮಿಸಲಿ. ಬಳಿಕ ಮಾತನಾಡಲಿ’ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.