ಸೋಮವಾರ, ಮಾರ್ಚ್ 8, 2021
22 °C

ಟೈಗರ್‌ ಜಿಂದಾ ಹೈ: ಖುಷಿ ಕೊಡ್ತು ರೊಮಾನ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೈಗರ್‌ ಜಿಂದಾ ಹೈ: ಖುಷಿ ಕೊಡ್ತು ರೊಮಾನ್ಸ್

ಕತ್ರಿನಾ ಕೈಫ್‌ ಜೊತೆಗೆ ಯಾವುದೇ ರೀತಿಯ ಜಗಳಗಳಿಲ್ಲ. ಆಕೆಯೊಂದಿಗೆ ರೊಮಾನ್ಸ್‌ ಮಾಡುವುದು ಖುಷಿ ನೀಡಿತು...

ಇದು ಸಲ್ಲು ಭಾಯ್ ಮಾತು. ‘ಏಕ್‌ ಥಾ ಟೈಗರ್‌’ (2012) ಚಿತ್ರದಲ್ಲಿ ಸಲ್ಮಾನ್‌ ಖಾನ್‌ ಮತ್ತು ಕತ್ರಿನಾ ಕೈಫ್‌ ಜೋಡಿ ನಟಿಸಿತ್ತು. ‘ಮೈನೆ ಪ್ಯಾರ್ ಕ್ಯುಂ ಕಿಯಾ’, ‘ಪಾರ್ಟನರ್‌’ ಚಿತ್ರಗಳಲ್ಲೂ ಇವರಿಬ್ಬರೂ ಒಟ್ಟಿಗೆ ನಟಿಸಿದ್ದರು. ಈ ಜೋಡಿ ಐದು ವರ್ಷಗಳ ನಂತರ ಮತ್ತೆ ‘ಟೈಗರ್‌ ಜಿಂದಾ ಹೈ’ ಚಿತ್ರದಲ್ಲಿ ಒಂದಾಗಿದೆ.

‘ದೀರ್ಘಕಾಲದ ನಂತರ ಒಟ್ಟಿಗೆ ನಟಿಸಿದ ಅನುಭವ ಹೇಗಿತ್ತು?’ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಸಲ್ಮಾನ್‌ ಎಂದಿನಂತೆ ತುಟಿಯಂಚಿನಲ್ಲಿ ನಗು ತುಳುಕಿಸುತ್ತ ಉತ್ತರ ನೀಡಿದರು.

‘ಈ ಚಿತ್ರದ ಪ್ರಚಾರಕ್ಕಾಗಿ ಈಚೆಗೆ ಕತ್ರಿನಾ ಬಿಗ್‌ಬಾಸ್‌ ಕಾರ್ಯಕ್ರಮಕ್ಕೂ ಭೇಟಿ ನೀಡಿದ್ದರು. ಟೈಗರ್‌ ಜಿಂದಾ ಹೈ ಟ್ರೇಲರ್‌ಗೆ ಈಗಾಗಲೇ ಅದ್ಭುತ ಪ್ರತಿಕ್ರಿಯೆ ದೊರೆತಿದೆ. ಎರಡು ಹಾಡುಗಳನ್ನೂ ನೋಡುಗರು ಖುಷಿಯಿಂದಲೇ ಸ್ವೀಕರಿಸಿದ್ದಾರೆ. ಸಿನಿಮಾದ ಗೆಲುವು ಡಿ. 22ರಂದು ನಿರ್ಧಾರವಾಗಲಿದೆ’ ಎಂದು ಸಲ್ಲು ಹೇಳಿದ್ದಾರೆ.

ಇದೇ ಚಿತ್ರಕತೆ ಇರುವ ಮಲಯಾಳಂ ಚಿತ್ರ ‘ಟೇಕ್‌ ಆಫ್‌’ ಚಿತ್ರೋತ್ಸವಗಳಲ್ಲಿ ಜನಮನ್ನಣೆ ಗಳಿಸುತ್ತಿದೆ. ‘ಟೇಕ್‌ ಆಫ್‌’ನ ಬಿಸಿ ಆರುವ ಮೊದಲೇ ‘ಟೈಗರ್ ಜಿಂದಾ ಹೈ’ ತೆರೆಗೆ ಬರುತ್ತಿದೆ. ಜನಪ್ರಿಯ ಫಾರ್ಮುಲಾದೊಂದಿಗೆ ಬಾಕ್ಸ್‌ ಆಫೀಸ್‌ನಲ್ಲಿ ಏನು ಮ್ಯಾಜಿಕ್‌ ಮಾಡಲಿದೆ ಎಂದು ಕಾದು ನೋಡಬೇಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.