ಸೋಮವಾರ, ಮಾರ್ಚ್ 1, 2021
30 °C

ಡೈನಾಮೊಸ್‌ಗೆ ಜಯದ ಕನಸು

ಪಿಟಿಐ Updated:

ಅಕ್ಷರ ಗಾತ್ರ : | |

ಡೈನಾಮೊಸ್‌ಗೆ ಜಯದ ಕನಸು

ನವದೆಹಲಿ: ಸತತ ಎರಡು ಸೋಲುಗಳಿಂದ ಮೈ ಕೊಡವಿ ನಿಂತಿರುವ ಡೆಲ್ಲಿ ಡೈನಾಮೊಸ್‌ ತಂಡ ಈಗ ಜಯದ ಮಂತ್ರ ಜಪಿಸುತ್ತಿದೆ.

ಬುಧವಾರದ ಪಂದ್ಯದಲ್ಲಿ ಡೈನಾಮೊಸ್‌, ಜೇಮ್‌ಷೆಡ್‌ಪುರ ಎಫ್‌ಸಿ ವಿರುದ್ಧ ಸೆಣಸಲಿದೆ.

ಎಫ್‌ಸಿ ಪುಣೆ ಸಿಟಿ ವಿರುದ್ಧ ಗೆದ್ದು ಅಭಿಯಾನ ಆರಂಭಿಸಿದ್ದ ಡೆಲ್ಲಿ ತಂಡ ಆ ನಂತರದ ಪಂದ್ಯಗಳಲ್ಲಿ ಬೆಂಗಳೂರು ಎಫ್‌ಸಿ ಮತ್ತು ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ವಿರುದ್ಧ ಸೋತಿತ್ತು.

ಮುಖ ಗವಸು ಧರಿಸಿ ಅಭ್ಯಾಸ: ವಾಯು ಮಾಲಿನ್ಯದ ಕಾರಣ ಡೈನಾಮೊಸ್‌ ಮತ್ತು ಜೇಮ್‌ಷೆಡ್‌ಪುರ ತಂಡಗಳ ಕೆಲ ಆಟಗಾರರು ಮಂಗಳವಾರ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಮುಖ ಗವಸು ಧರಿಸಿ ಅಭ್ಯಾಸ ನಡೆಸಿದರು.

‘ಅಭ್ಯಾಸದ ವೇಳೆ ಮುಖ ಗವಸು ಧರಿಸಿದ್ದರು. ಆದರೆ ಪಂದ್ಯದ ದಿನ ಯಾರೂ  ಇದನ್ನು ಹಾಕುವುದಿಲ್ಲ’ ಎಂದು ಡೆಲ್ಲಿ ತಂಡದ ಮುಖ್ಯ ಕೋಚ್‌ ಮಿಗುಯೆಲ್‌ ಏಂಜೆಲ್‌ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.