ಯಾದಗಿರಿಯಲ್ಲಿ ಕರಾಳ ದಿನ ಆಚರಣೆಗೆ ಯತ್ನಿಸಿದ ಮುಸ್ಲಿಂ ಯುವಕರ ಗುಂಪು

7
ಲಘುಲಾಠಿ ಪ್ರಹಾರ

ಯಾದಗಿರಿಯಲ್ಲಿ ಕರಾಳ ದಿನ ಆಚರಣೆಗೆ ಯತ್ನಿಸಿದ ಮುಸ್ಲಿಂ ಯುವಕರ ಗುಂಪು

Published:
Updated:
ಯಾದಗಿರಿಯಲ್ಲಿ ಕರಾಳ ದಿನ ಆಚರಣೆಗೆ ಯತ್ನಿಸಿದ ಮುಸ್ಲಿಂ ಯುವಕರ ಗುಂಪು

ಯಾದಗಿರಿ: ಬಾಬ್ರಿ ಮಸೀದಿ ಧ್ವಂಸ ದಿನವನ್ನು ಕರಾಳ ದಿನವನ್ನಾಗಿ ಆಚರಿಸುವಂತೆ ಒತ್ತಾಯಿಸಿ ಅಂಗಡಿಗಳನ್ನು ಮುಚ್ಚಿಸಲು ಮುಂದಾಗಿದ್ದ ಮುಸ್ಲಿಂ ಯುವಕರ ಗುಂಪಿನ ಮೇಲೆ ಬುಧವಾರ ಪೊಲೀಸರು ಲಘುಲಾಠಿ ಪ್ರಹಾರ ನಡೆಸಿದರು.

ಬೆಳಿಗ್ಗೆ 11.30ಕ್ಕೆ ನಗರದ ಟಿಪ್ಪುಸುಲ್ತಾನ ಸಂಯುಕ್ತರಂಗ ಸಂಘಟನೆಯು ಬಾಬ್ರಿ ಮಸೀದಿ ಧ್ವಂಸ ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಸಿದ್ಧತೆ ನಡೆಸಿತ್ತು. ಇದೇ ಸಂದರ್ಭದಲ್ಲಿ ರಟ್ಟೆಗೆ ಕಪ್ಪುಕಟ್ಟಿಕೊಂಡಿದ್ದ 30ಕ್ಕೂ ಹೆಚ್ಚು ಮುಸ್ಲಿಂ ಯುವಕರು ಸರ್ಕಾರಿ ಪದವಿ ಕಾಲೇಜು ಕಡೆಯಿಂದ ಚಿತ್ತಾಪುರ ಸಂಪರ್ಕ ರಸ್ತೆ ಪ್ರವೇಶಿಸಿದರು. ನಂತರ ರಸ್ತೆ ಪಕ್ಕದಲ್ಲಿನ ಮುಸ್ಲಿಮರ ಅಂಗಡಿ, ಹೋಟೆಲ್‌ಗಳನ್ನು ಮಾತ್ರ ಮುಚ್ಚಿಸಿ ಅಘೋಷಿತ ಬಂದ್‌, ಕರಾಳ ದಿನ ಆಚರಿಸುವಂತೆ ಒತ್ತಾಯಿಸುತ್ತಾ ಸುಭಾಷ್ ವೃತ್ತದ ಕಡೆ ಸಾಗಿದರು.

ಹತ್ತಾರು ಅಂಗಡಿಗಳನ್ನು ಮುಚ್ಚಿಸಿದ ಬಳಿಕ ಈ ದಿಢೀರ್ ಬೆಳವಣಿಗೆಯಿಂದಾಗಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿತು. ಈ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಮುಸ್ಲಿಂ ಯುವಕರ ಗುಂಪಿನ ಮೇಲೆ ಲಘುಲಾಠಿ ಪ್ರಹಾರ ನಡೆಸಿದರು. ಚದುರಿದ ಯುವಕರು ಗುಂಪುನಿಂದ ದಿಕ್ಕಾಪಾಲಾಗಿ ಓಡಿದರು.

ಸ್ಥಳಕ್ಕೆ ಆಗಮಿಸಿದ ಡಿವೈಎಸ್‌ಪಿ ಎಸ್‌. ಪಾಂಡುರಂಗ,‘ಅಘೋಷಿತ ಬಂದ್‌ ಆಚರಣೆಗೆ ಕುಮ್ಮಕ್ಕು ನೀಡಿದವರ ಹಾಗೂ ನಗರದಲ್ಲಿ ಶಾಂತಿ ಕದಡಲು ಮುಂದಾಗಿದ್ದ ಯುವಕರ ಗುಂಪಿನ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಜಿಲ್ಲಾಡಳಿತಕ್ಕೆ ಮನವಿ: ಬಾಬ್ರಿ ಮಸೀದಿ ಧ್ವಂಸ ಖಂಡಿಸಿ ಮತ್ತು ಪ್ರಕರಣ ಶೀಘ್ರ ಇತ್ಯರ್ಥಪಡಿಸುವಂತೆ ಒತ್ತಾಯಿಸಿ ನಗರದ ಟಿಪ್ಪುಸುಲ್ತಾನ ಸಂಯುಕ್ತ ರಂಗದ ಜಿಲ್ಲಾ ಅಧ್ಯಕ್ಷ ಅಬ್ದುಲ್ ಕರೀಂ ನೇತೃತ್ವದಲ್ಲಿ ಮುಸ್ಲಿಂ ಯುವ ಮುಖಂಡರು ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry