ಮದ್ಯಪಾನ ವಯಸ್ಸಿನ ಮಿತಿಯನ್ನು 21ರಿಂದ 23ಕ್ಕೆ ಏರಿಸಲು ಕೇರಳ ಸರ್ಕಾರ ನಿರ್ಧಾರ

7

ಮದ್ಯಪಾನ ವಯಸ್ಸಿನ ಮಿತಿಯನ್ನು 21ರಿಂದ 23ಕ್ಕೆ ಏರಿಸಲು ಕೇರಳ ಸರ್ಕಾರ ನಿರ್ಧಾರ

Published:
Updated:
ಮದ್ಯಪಾನ ವಯಸ್ಸಿನ ಮಿತಿಯನ್ನು 21ರಿಂದ 23ಕ್ಕೆ ಏರಿಸಲು ಕೇರಳ ಸರ್ಕಾರ ನಿರ್ಧಾರ

ತಿರುವನಂತಪುರ: ಮದ್ಯಪಾನ ಮಾಡುವವರ ವಯಸ್ಸಿನ ಮಿತಿಯನ್ನು 21 ರಿಂದ 23ಕ್ಕೆ ಏರಿಸಲು ಕೇರಳ ಸರ್ಕಾರ ನಿರ್ಧರಿಸಿದೆ.

ಪ್ರಸ್ತುತ ಮದ್ಯಪಾನ ನಿಯಮಾವಳಿಗಳಲ್ಲಿ ಕೊಂಚ ತಿದ್ದುಪಡಿ ತರುವುದರ ಮೂಲಕ ಆದೇಶ ಹೊರಡಿಸಲಾಗುವುದು ಎಂದು ಕೇರಳ ಸರ್ಕಾರ ಹೇಳಿದೆ.

ಸರ್ಕಾರ ಮದ್ಯಪಾನಕ್ಕೆ ಪ್ರೋತ್ಸಾಹ ನೀಡುವುದಿಲ್ಲ. ಹಾಗಾಗಿ ಮದ್ಯಪಾನ ನಿಷೇಧಕ್ಕೆ ಸಂಬಂಧಿಸಿದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅಬಕಾರಿ ಮತ್ತು ಕಾರ್ಮಿಕ ಸಚಿವ ಟಿ.ಪಿ ರಾಮಕೃಷ್ಣನ್ ಹೇಳಿದ್ದಾರೆ.

2015ರಲ್ಲಿ ಪಂಚತಾರ ಹೋಟೆಲ್‌ಗಳಿಗೆ ಮದ್ಯ ಒದಗಿಸಲು ಐಎಮ್‌ಎಫ್‌ಎಲ್ ಸಂಸ್ಥೆಗೆ ಅನುಮತಿ ನೀಡಿದ ವೇಳೆ ಮದ್ಯಪಾನ ನಿಯಮಾವಳಿಯಲ್ಲಿ ಬದಲಾವಣೆಗಳನ್ನು ತರಲು ಕಾಂಗ್ರೆಸ್ ಆಡಳಿತ ಚಿಂತನೆ ನಡೆಸಿತ್ತು. ಈ ಸಂಬಂಧ 700 ಅಂಗಡಿಗಳನ್ನು ಮುಚ್ಚಿಸಲಾಗಿತ್ತು.

ಇಡೀ ಭಾರತದಲ್ಲಿ ಕೇರಳ ಮದ್ಯದ ಬಳಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಆಂಧ್ರಪ್ರದೇಶ ಮೊದಲ ಸ್ಥಾನದಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry