ಮಂಗಳವಾರ, ಮಾರ್ಚ್ 2, 2021
29 °C

ಬಾಕ್ಸ್‌ ಕ್ರಿಕೆಟ್‌ ಲೀಗ್‌ಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಕ್ಸ್‌ ಕ್ರಿಕೆಟ್‌ ಲೀಗ್‌ಗೆ ಸಿದ್ಧತೆ

‘ಕಳೆದ ವರ್ಷದ ಲೀಗ್‌ ಕೆಟ್ಟ ಅನುಭವ ನೀಡಿತ್ತು. ಆದರೂ, ಎಲ್ಲ ತೊಂದರೆ ಎದುರಿಸಿ ಕ್ರಿಕೆಟ್‌ ಆಡಿದೆ’ ಎಂದರು ನಟ ಆದಿ ಲೋಕೇಶ್‌.

ಕನ್ನಡ ಚಿತ್ರತಾರೆಯರ ಸೆಲೆಬ್ರಿಟಿ ಬಾಕ್ಸ್‌ ಕ್ರಿಕೆಟ್‌ ಲೀಗ್ 2 ಕುರಿತು ಕರೆದಿದ್ದ ಸುದ್ದಿಗೋಷ್ಠಿಯು ಕಳೆದ ಲೀಗ್‌ನ ಅವರ ಅನುಭವ ಹಂಚಿಕೊಳ್ಳಲು ವೇದಿಕೆ ಒದಗಿಸಿತ್ತು. ‘ನನ್ನ ತಂಡದಲ್ಲಿದ್ದ ನಟಿಯರೇ ಅಂಪೈರ್‌ಗಳಿಗೆ ಕೆಟ್ಟದಾಗಿ ಬೈದಿದ್ದಾರೆ. ಈ ಬಾರಿ ಇಂತಹ ಅವಘಡಕ್ಕೆ ಅವಕಾಶ ನೀಡಬಾರದು’ ಎಂದರು.

ಕಮರ್‌ ಫಿಲ್ಮ್ ಫ್ಯಾಕ್ಟರಿ ಪ್ರಾಯೋಜಿತ ಈ ಟೂರ್ನಿಗೆ ಈಗಾಗಲೇ ಭರದ ಸಿದ್ಧತೆ ನಡೆದಿದೆ. ಈ ಬಾರಿ ಶಿವಮೊಗ್ಗ ಮತ್ತು ಗುಲ್ಬರ್ಗ ತಂಡ ಹೊಸದಾಗಿ ಸೇರ್ಪಡೆಯಾಗಿವೆ. ಪ್ರತಿ ತಂಡದಲ್ಲೂ ಹೊಸಬರನ್ನು ಕೈಬಿಡಲಾಗಿದೆಯಂತೆ. 10 ಹುಡುಗರು ಮತ್ತು ಐವರು ಹುಡುಗಿಯರು ಪ್ರತಿಯೊಂದು ತಂಡದಲ್ಲಿ ಇದ್ದಾರೆ. ಪಂದ್ಯದ ವೇಳೆ ಕೆಟ್ಟದಾಗಿ ಭಾಷೆ ಬಳಸಿದರೆ ಆಯಾ ತಂಡದ ಸ್ಕೋರ್‌ಗಳನ್ನು ಕಡಿತಗೊಳಿಸಲಾಗುವುದು ಎನ್ನುವುದು ಆಯೋಜಕರ ಹೇಳಿಕೆ.

‘ನಾನು ಯಾವು‌ದೇ ವಿವಾದ ಮಾಡಿಕೊಳ್ಳಲು ಇಚ್ಛಿಸುವುದಿಲ್ಲ’ ಎಂದರು ದಾವಣಗೆರೆ ತಂಡದ ಉಪ ನಾಯಕಿ ಅದಿತಿ.

ಕಮರ್‌ ‍ಫ್ಯಾಕ್ಟರಿಯ ಕಮರ್‌, ‘ಈ ಬಾರಿ ಟೂರ್ನಿಯಲ್ಲಿ ಸಾಕಷ್ಟು ಮಾರ್ಪಾಡು ಮಾಡಲಾಗಿದೆ. ಎಲ್ಲ ತಂಡಗಳಿಗೂ ತರಬೇತಿ ನೀಡಿದ ಬಳಿಕ ಟೂರ್ನಿ ಶುರುವಾಗಲಿದೆ. 15 ಪಂದ್ಯಗಳು ನಡೆಯಲಿವೆ. ಪ್ರತಿ ತಂಡದಲ್ಲೂ ಸೆಲೆಬ್ರಿಟಿ ಹೊರತಾಗಿ ಸಾಮಾನ್ಯ ಸದಸ್ಯರೊಬ್ಬರನ್ನು ಆಡಿಸಲು ನಿರ್ಧರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಫ್ಯಾಷನ್‌ ಡಿಸೈನರ್ ಸಭಾ, ದೀಪಿಕಾ ದಾಸ್‌, ಆಕಾಶ್‌ ಪರ್ವ ದಾವಣಗೆರೆ ತಂಡದಲ್ಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.