ಸೋಮವಾರ, ಮಾರ್ಚ್ 8, 2021
22 °C

ಏಪ್ರಿಲ್‌ಗೆ ಬರಲಿದೆ ‘2.0’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏಪ್ರಿಲ್‌ಗೆ ಬರಲಿದೆ ‘2.0’

ಸೂಪರ್‌ಸ್ಟಾರ್ ರಜನಿಕಾಂತ್‌, ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಹಾಗೂ ನಟಿ ಆ್ಯಮಿ ಜಾಕ್ಸನ್ ಮುಖ್ಯ ಭೂಮಿಕೆಯಲ್ಲಿರುವ ‘2.0’ ಚಿತ್ರದ ಬಿಡುಗಡೆ ಇನ್ನೂ ಮೂರು ತಿಂಗಳು ತಡವಾಗಲಿದೆ.

ಶಂಕರ್‌ ಷಣ್ಮುಗಂ ನಿರ್ದೇಶನದ ಈ ಚಿತ್ರ ಜ.26ಕ್ಕೆ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿತ್ತು. ಚಿತ್ರದ ಗ್ರಾಫಿಕ್ಸ್‌ ಕೆಲಸ ಇನ್ನೂ ಮುಗಿಯದ ಕಾರಣ ಬಿಡುಗಡೆಯನ್ನು ಏಪ್ರಿಲ್‌ 27ಕ್ಕೆ ಮುಂದೂಡಲಾಗಿದೆ ಎಂದು ಚಿತ್ರತಂಡ ಹೇಳಿದೆ.

₹450 ಕೋಟಿ ಬಜೆಟ್‌ನ ‘2.0’ ಏಕಕಾಲಕ್ಕೆ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ತೆರೆ ಕಾಣಲಿದೆ. ಮಹೇಶ್‌ಬಾಬು ಅಭಿನಯದ ‘ಭರತ್‌ ಅನೆ ನೇನು’ ಮತ್ತು ಅಲ್ಲು ಅರ್ಜುನ್ ಅಭಿನಯದ ‘ನಾ ಪೇರು ಸೂರ್ಯ’ ಚಿತ್ರಗಳೂ ಏಪ್ರಿಲ್‌ನಲ್ಲಿಯೇ ತೆರೆಗೆ ಬರಲಿವೆ. ‘2.0’ ಸಹ ಇದೇ ತಿಂಗಳು ಬಿಡುಗಡೆಯಾಗುವುದನ್ನು ಅಲ್ಲಿನ ನಿರ್ಮಾಪಕರು ವಿರೋಧಿಸುತ್ತಿದ್ದಾರೆ.

ಹಾಲಿವುಡ್‌ನ ‘ದಿ ನ್ಯೂ ಮ್ಯುಟೆಂಟ್ಸ್‌’ ಮತ್ತು ‘ಅವೆಂಜರ್ಸ್‌: ಇನ್‌ಫಿನಿಟಿ’ ವಾರ್‌ ಚಿತ್ರಗಳೂ ಏಪ್ರಿಲ್‌ ತಿಂಗಳಲ್ಲಿಯೇ ತೆರೆ ಕಾಣಲಿವೆ. ರಜನಿಕಾಂತ್ ಚಿತ್ರಗಳಿಗೆ ಅಮೆರಿಕದಲ್ಲಿ ಉತ್ತಮ ಮಾರುಕಟ್ಟೆ ಇದೆ. ಭಾರಿ ಬಜೆಟ್‌ನ ಎರಡು ತೆಲುಗು ಮತ್ತು ಎರಡು ಹಾಲಿವುಡ್ ಚಿತ್ರಗಳೊಂದಿಗೆ ಸ್ಪರ್ಧಿಸಲಿರುವ ‘2.0’ ಮಾರುಕಟ್ಟೆಯಲ್ಲಿ ಗೆಲ್ಲಬಹುದೇ ಎಂಬ ಲೆಕ್ಕಾಚಾರದಲ್ಲಿ ಕಾಲಿವುಡ್ ಪಂಡಿತರು ಬ್ಯುಸಿಯಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.