‘ಸೂಪರ್ ಅರ್ಥ್’ ಜೀವಿಗಳ ವಾಸಕ್ಕೆ ಯೋಗ್ಯ ಸಂಭವ

ಟೊರೆಂಟೊ: ‘ಸೂಪರ್ ಅರ್ಥ್’ ಕೆ2–18ಬಿ ಗ್ರಹ ಜೀವಿಗಳ ವಾಸಕ್ಕೆ ಯೋಗ್ಯವಾಗಿರುವ ಸಾಮರ್ಥ್ಯ ಹೊಂದಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ.
2015ರಲ್ಲಿ ಪತ್ತೆಯಾಗಿರುವ ಕೆ2–18ಬಿ ಗ್ರಹ 111 ಜ್ಯೋತಿರ್ವರ್ಷಗಳಷ್ಟು ಅಂತರದಲ್ಲಿದೆ.
ಐರೋಪ್ಯ ದಕ್ಷಿಣ ವೀಕ್ಷಣಾಲಯದ (ಇಎಸ್‌ಒ) ಮೂಲಕ ಸಂಗ್ರಹಿಸಿದ ದತ್ತಾಂಶ ಆಧರಿಸಿ ಕೆನಡಾದ ಟೊರೆಂಟೊ ವಿಶ್ವವಿದ್ಯಾಲಯದ ಸಂಶೋ
ಧಕರು ಈ ಗ್ರಹ ‘ಸೂಪರ್ ಅರ್ಥ್’ ಆಗುವ ಸಾಮರ್ಥ್ಯ ಹೊಂದಿದೆ ಎಂದು ಪತ್ತೆ ಹಚ್ಚಿದ್ದಾರೆ.
‘ಕೆ2–18ಬಿ ಗ್ರಹದ ಸಾಂದ್ರತೆ ತಿಳಿಯಲು ಸಾಧ್ಯವಾಗಿದ್ದು ಅದ್ಭುತ. ಆದರೆ ನಮ್ಮ ಸೌರಮಂಡಲದ ಆಚೆಗಿರುವ ಗ್ರಹ ಪತ್ತೆ ಆಗಿರುವುದು ಅದೃಷ್ಟ ಮತ್ತು ಉತ್ಸಾಹ ನೀಡುವಂತಹದ್ದು’ ಎಂದು ಟೊರೆಂಟೊ ವಿಶ್ವವಿದ್ಯಾಲಯದ ಪಿಎಚ್.ಡಿ ವಿದ್ಯಾರ್ಥಿ ರ‍್ಯಾನ್ ಕ್ಲೌಟಿಯರ್ ಹೇಳಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.