ಸೋಮವಾರ, ಮಾರ್ಚ್ 1, 2021
31 °C
ಮಿಚೆಲ್‌ ಸ್ಟಾರ್ಕ್‌, ಜೋಶ್ ಹ್ಯಾಜಲ್‌ವುಡ್‌ ದಾಳಿಗೆ ಕಂಗೆಟ್ಟ ಪ್ರವಾಸಿ ತಂಡ

ಇಂಗ್ಲೆಂಡ್‌ ದಿಢೀರ್ ಪತನ; ಆಸ್ಟ್ರೇಲಿಯಾಗೆ ಜಯ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಇಂಗ್ಲೆಂಡ್‌ ದಿಢೀರ್ ಪತನ; ಆಸ್ಟ್ರೇಲಿಯಾಗೆ ಜಯ

ಅಡಿಲೇಡ್‌, ಆಸ್ಟ್ರೇಲಿಯಾ (ಎಎಫ್‌ಪಿ): ಜಯದ ನಿರೀಕ್ಷೆಯೊಂದಿಗೆ ಕಣಕ್ಕೆ ಇಳಿದ ಇಂಗ್ಲೆಂಡ್‌ ದಿಢೀರ್ ಪತನ ಕಂಡಿತು. ವೇಗಿಗಳಾದ ಮಿಚೆಲ್ ಸ್ಟಾರ್ಕ್‌ ಮತ್ತು ಜೋಶ್‌ ಹ್ಯಾಜಲ್‌ವುಡ್‌ ಪರಿಣಾಮಕಾರಿ ದಾಳಿಗೆ ಪ್ರವಾಸಿ ತಂಡದ ಕನಸು ಕಮರಿ ಹೋಯಿತು. ಆತಿಥೇಯ ಆಸ್ಟ್ರೇಲಿಯಾ ಆ್ಯಷಸ್ ಸರಣಿಯ ಎರಡನೇ ಪಂದ್ಯದಲ್ಲಿ 120 ರನ್‌ಗಳ ಜಯ ಸಾಧಿಸಿತು.

ನಾಲ್ಕನೇ ದಿನವಾದ ಮಂಗಳವಾರ ವೇಗದ ಬೌಲರ್‌ ಆ್ಯಂಡರ್ಸನ್‌ ಮತ್ತು ನಾಯಕ ಜೋ ರೂಟ್ ಅವರ ಮಿಂಚಿನ ಆಟದ ನೆರವಿನಿಂದ ಇಂಗ್ಲೆಂಡ್‌ ಜಯದತ್ತ ಹೆಜ್ಜೆಹಾಕಿತ್ತು. 354 ರನ್‌ಗಳ ಗುರಿ ಬೆನ್ನತ್ತಿದ ತಂಡ ನಾಲ್ಕು ವಿಕೆಟ್ ಕಳೆದುಕೊಂಡು 176 ರನ್‌ ಗಳಿಸಿತ್ತು.

ಆದರೆ ಬುಧವಾರ ಬೆಳಿಗ್ಗೆ ತಂಡ ನಿರಂತರ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ 10 ವಿಕೆಟ್‌ಗಳಿಂದ ಸೋತಿತ್ತು.ದಿನದ ಎರಡನೇ ಎಸೆತದಲ್ಲಿ ಕ್ರಿಸ್ ವೋಕ್ಸ್ ಅವರನ್ನು ಔಟ್‌ ಮಾಡಿದ ಹ್ಯಾಜಲ್‌ವುಡ್‌ ಇಂಗ್ಲೆಂಡ್‌ನ ಆಸೆಗೆ ತಣ್ಣೀರು ಹಾಕಿದರು.

ಸಂಕ್ಷಿಪ್ತ ಸ್ಕೊರ್‌: ಆಸ್ಟ್ರೇಲಿಯಾ, ಮೊದಲ ಇನಿಂಗ್ಸ್‌: 8ಕ್ಕೆ 442 ಡಿಕ್ವೇರ್ಡ್‌; ಇಂಗ್ಲೆಂಡ್‌, ಮೊದಲ ಇನಿಂಗ್ಸ್‌: 227ಕ್ಕೆ ಆಲೌಟ್‌; ಆಸ್ಟ್ರೇಲಿಯಾ,

ಎರಡನೇ ಇನಿಂಗ್ಸ್‌: 138ಕ್ಕೆ ಆಲೌಟ್‌; ಇಂಗ್ಲೆಂಡ್‌, ಎರಡನೇ ಇನಿಂಗ್ಸ್‌ (ಮಂಗಳವಾರದ ಅಂತ್ಯಕ್ಕೆ 62 ಓವರ್‌ಗಳಲ್ಲಿ 4ಕ್ಕೆ 176):84.2 ಓವರ್‌ಗಳಲ್ಲಿ 233ಕ್ಕೆ ಆಲೌಟ್‌ (ಜೋ ರೂಟ್‌ 67, ಜಾನಿ ಬೇಸ್ಟೊ 36; ಮಿಚೆಲ್ ಸ್ಟಾರ್ಕ್‌ 88ಕ್ಕೆ5, ಜೋಶ್ ಹ್ಯಾಜಲ್‌ವುಡ್‌ 49ಕ್ಕೆ2, ನೇಥನ್ ಲಿಯಾನ್‌ 45ಕ್ಕೆ2). ಫಲಿತಾಂಶ: ಆಸ್ಟ್ರೇಲಿಯಾಗೆ 120 ರನ್‌ಗಳ ಜಯ. ಪಂದ್ಯಶ್ರೇಷ್ಠ–ಶಾನ್ ಮಾರ್ಷ್‌ (ಆಸ್ಟ್ರೇಲಿಯಾ). ಮುಂದಿನ ಪಂದ್ಯ–ಡಿಸೆಂಬರ್‌ 9ರಿಂದ, ಪರ್ಥ್‌.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.