ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿಸರ ಮಿತ್ರ ಶಾಲೆ’ ಅವಧಿ ವಿಸ್ತರಣೆ

Last Updated 7 ಡಿಸೆಂಬರ್ 2017, 8:55 IST
ಅಕ್ಷರ ಗಾತ್ರ

ತುಮಕೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ತುಮಕೂರು ವಿಜ್ಞಾನ ಕೇಂದ್ರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ನೀಡುವ ಪರಿಸರ ಮಿತ್ರ ಶಾಲೆ ಪ್ರಶಸ್ತಿಗೆ ಸ್ವಮೌಲ್ಯಮಾಪನ ನಮೂನೆ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ.

ಉತ್ತಮ ಪರಿಸರ ಹೊಂದಿರುವ ಮತ್ತು ಮಕ್ಕಳು ಹಾಗೂ ಸಾರ್ವಜನಿಕರಲ್ಲಿ ಪರಿಸರ ಕಾಳಜಿ ಮೂಡಿಸುತ್ತಿರುವ ಶಾಲೆಗಳನ್ನು ಗುರುತಿಸಿ ಜಿಲ್ಲಾ ಪರಿಸರ ಮಿತ್ರ ಶಾಲೆ ಗೌರವ ಪಡೆದ ಶಾಲೆಗೆ ₹ 20,000, ಹಸಿರು ಶಾಲೆಗೆ ₹ 5,000 ಹಾಗೂ ಕಿತ್ತಳೆ ಶಾಲೆಗೆ ₹ 4,000 ನಗದು ಬಹುಮಾನ ಮತ್ತು ಪಶಸ್ತಿ ಪತ್ರ ನೀಡಲಾಗುವುದು.

ಡಾ.ಟಿ.ಆರ್‌.ಅನಂತರಾಮು ಪರಿಸರ ಪ್ರಶಸ್ತಿ ಹಾಗೂ ತುಮಕೂರು ಶ್ರೀರಾಮನಗರದ ನಾಗಮ್ಮ ಪರಿಸರ ಪ್ರಶಸ್ತಿಗಳನ್ನೂ ಪ್ರದಾನ ಮಾಡಲಾಗುತ್ತದೆ. ಈ ಕುರಿತು ಜುಲೈ ತಿಂಗಳಲ್ಲಿ ಶಾಲಾ ಮುಖ್ಯಸ್ಥರಿಗೆ ತರಬೇತಿಯನ್ನು ನೀಡಲಾಗಿದೆ.

ಶಾಲೆಯವರು ಸ್ವಮೌಲ್ಯಮಾಪನ ನಮೂನೆಗಳನ್ನು ಭರ್ತಿ ಮಾಡಿ ಡಿಸೆಂಬರ್‌ 15ರ ಒಳಗಾಗಿ ಬಾಲಭವನದ ಆವರಣದಲ್ಲಿರುವ ತುಮಕೂರು ವಿಜ್ಞಾನ ಕೇಂದ್ರಕ್ಕೆ ಸಲ್ಲಿಸಬೇಕು ಎಂದು ಕೇಂದ್ರದ ಅಧ್ಯಕ್ಷ ಸಿ.ವಿಶ್ವನಾಥ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೊ.ನಂ: 9448173978

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT