7

ಎನ್.ಆರ್.ರಮೇಶ್ ಆರೋಪಕ್ಕೆ ಸಚಿವ ಜಾರ್ಜ್ ಗರಂ

Published:
Updated:
ಎನ್.ಆರ್.ರಮೇಶ್ ಆರೋಪಕ್ಕೆ ಸಚಿವ ಜಾರ್ಜ್ ಗರಂ

ಬೆಂಗಳೂರು: ’ನಿಮ್ಹಾನ್ಸ್‌ನಲ್ಲಿ ಇರಬೇಕಾದವರು ಬೀದಿಯಲ್ಲಿ ನಿಂತು ಮಾಡುವ ಆರೋಪಕ್ಕೆ ಉತ್ತರ ಕೊಡಲ್ಲ’ ಎಂದು ಬಿಜೆಪಿ ನಗರ ಜಿಲ್ಲೆ ವಕ್ತಾರ ಎನ್.ಆರ್.ರಮೇಶ್ ಆರೋಪಕ್ಕೆ ಸಚಿವ ಜಾರ್ಜ್ ಪ್ರತಿಕ್ರಿಯಿಸಿದರು.

ವಿಧಾನಸೌಧದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಏನು ಅವ್ಯವಹಾರ, ಅದರ ಕುರಿತು ದಾಖಲೆಗಳು ಇವೆಯೇ, ದಾಖಲೆ ಓದಿ ಪ್ರಶ್ನಿಸಿ. ಅದೇನೇ ಇದ್ದರೂ ತನಿಖೆ ಆಗಲಿ’ ಎಂದರು.

‘ಮೆಂಟಲ್ ಆಸ್ಪತ್ರೆಗೆ ಹೋಗಬೇಕಾದವರ ಆರೋಪಕ್ಕೆ ಉತ್ತರ ನೀಡುವುದಿಲ್ಲ. ಜವಾಬ್ದಾರಿಯುತವಾಗಿ ಯಾರಾದರು ಆರೋಪ ಮಾಡಿದರೆ ಉತ್ತರ ನೀಡುವೆ. ಎನ್.ಆರ್.ರಮೇಶ್ ಅವರಿಗೆ ಮೆಂಟಲ್ ಆಸ್ಪತ್ರೆಗೆ ಹೋಗೋಕೆ ಹೇಳಿ’ ಎಂದು ಸಚಿವ ಜಾರ್ಜ್‌ ಗುಡುಗಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry