7

‘ಅಂತರ್‌ಧರ್ಮೀಯ ಮದುವೆಯಿಂದ ಹೆಣ್ಣಿನ ಧರ್ಮ ಬದಲಾಗದು’

Published:
Updated:
‘ಅಂತರ್‌ಧರ್ಮೀಯ ಮದುವೆಯಿಂದ ಹೆಣ್ಣಿನ ಧರ್ಮ ಬದಲಾಗದು’

ನವದೆಹಲಿ: ಬೇರೆ ಧರ್ಮಕ್ಕೆ ಸೇರಿದವರನ್ನು ಮದುವೆಯಾಗಿದ್ದಾರೆ ಎಂಬ ಕಾರಣಕ್ಕೆ ಮಹಿಳೆಯ ಹಕ್ಕನ್ನು ನಿರಾಕರಿಸಲು ಸಾಧ್ಯವಿಲ್ಲ. ಮದುವೆಯಾದ ಮಾತ್ರಕ್ಕೆ ಮಹಿಳೆಯು ತನ್ನನ್ನು ಗಂಡನಿಗೆ ಒತ್ತೆ ಇಡುವುದಿಲ್ಲ. ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ಮದುವೆಯಾದ ಮಹಿಳೆಯು ತನ್ನ ಮೂಲ ಧರ್ಮದಲ್ಲಿಯೇ ಮುಂದುವರಿಯುತ್ತಾರೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ತಂದೆಯ ಸಾವಿನ ಬಳಿಕ ಶ್ರದ್ಧಾಂಜಲಿ ಅರ್ಪಿಸಲು ಪಾರ್ಸಿ ಮಂದಿರ ಪ್ರವೇಶಕ್ಕೆ ಮುಂಬೈನ ವಲ್ಸದ್‌ ಪಾರ್ಸಿ ಟ್ರಸ್ಟ್‌ ಮಹಿಳೆಯೊಬ್ಬರಿಗೆ ಅವಕಾಶ ನಿರಾಕರಿಸಿತ್ತು. ‘ಇದು ಒಂದು ರೀತಿಯ ಬಹಿಷ್ಕಾರವೇ ಆಗಿದೆ’ ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಅಭಿಪ್ರಾಯಪಟ್ಟಿದೆ.

‘ನಾನು ಹಿಂದೂ ವ್ಯಕ್ತಿಯನ್ನು ಮದುವೆಯಾಗುವುದಕ್ಕೆ ಇದೇ ಟ್ರಸ್ಟ್‌ನ ಒಬ್ಬರು ಟ್ರಸ್ಟಿ ಅಡ್ಡಿ ಮಾಡಿದ್ದರು. ಬೇರೆ ಧರ್ಮದವರನ್ನು ಮದುವೆಯಾದ ಗಂಡು ಮಂದಿರ ಪ್ರವೇಶಿಸಬಹುದಾದರೆ ನಾನು ಯಾಕೆ ಪ್ರವೇಶಿಸಬಾರದು’ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಪ್ರಶ್ನಿಸಿದ್ದರು.

ಧರ್ಮವನ್ನು ಆಚರಿಸುವ ಹಕ್ಕನ್ನು ನಿರಾಕರಿಸುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಸಂವಿಧಾನ ಪೀಠ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry