7

ಜೈಲಿನಿಂದಲೇ ಉದ್ಯಮಿಗೆ ಬೆದರಿಕೆ ಕರೆ

Published:
Updated:

ಮೈಸೂರು: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ಕೈದಿ ಬಸವರಾಜು ಎಂಬಾತ ಮಂಡ್ಯದ ಉದ್ಯಮಿಯೊಬ್ಬರಿಗೆ ಬೆದರಿಕೆ ಕರೆ ಮಾಡಿ ₹ 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ.

ಬೆದರಿಕೆ ಕರೆಯ ಜಾಡುಹಿಡಿದು ವಿಚಾರಣೆ ನಡೆಸಲು ಬಂದ ಪೊಲೀಸರಿಗೆ ಈತನ ಬಳಿ 135 ಗ್ರಾಂ ಗಾಂಜಾ, ಮೊಬೈಲ್‌ ಫೋನ್‌, ಬೆಂಕಿಪೊಟ್ಟಣದಲ್ಲಿ ಅಡಗಿಸಿಟ್ಟಿದ್ದ 4 ಸಿಮ್‌ಕಾರ್ಡ್‌ಗಳು ಪತ್ತೆಯಾಗಿವೆ. ಜತೆಗೆ, ಪಕ್ಕದ ಬ್ಯಾರಕ್‌ನಲ್ಲಿದ್ದ ಕುಮಾರ್ ಎಂಬ ಕೈದಿಯ ಬಳಿಯೂ ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಜಾಬಂದಿಯಾಗಿರುವ ಬಸವರಾಜು ಮಂಡ್ಯದ ಉದ್ಯಮಿಯೊಬ್ಬರಿಗೆ ಕರೆ ಮಾಡಿ ₹ 20 ಲಕ್ಷ ನೀಡಬೇಕು. ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಉದ್ಯಮಿಯು ಮಂಡ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry