ಶುಕ್ರವಾರ, ಫೆಬ್ರವರಿ 26, 2021
19 °C

‘ಟ್ರಂಪ್ ಆರೋಗ್ಯ ತಪಾಸಣೆ ಬಳಿಕ ದಾಖಲೆ ಬಿಡುಗಡೆ’

ಪಿಟಿಐ Updated:

ಅಕ್ಷರ ಗಾತ್ರ : | |

‘ಟ್ರಂಪ್ ಆರೋಗ್ಯ ತಪಾಸಣೆ ಬಳಿಕ ದಾಖಲೆ ಬಿಡುಗಡೆ’

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವರ್ಷದ ಆರಂಭದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಲಿದ್ದು, ನಂತರ ವೈದ್ಯರು ದಾಖಲೆಗಳನ್ನು ಬಿಡುಗಡೆ ಮಾಡುತ್ತಾರೆ ಎಂದು ಶ್ವೇತಭವನ ಹೇಳಿದೆ.

ಟ್ರಂಪ್ ಆರೋಗ್ಯ ಕುರಿತ ಪ್ರಶ್ನೆಗೆ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಈ ಮಾಹಿತಿ ನೀಡಿದ್ದಾರೆ. ಈ ಮೂಲಕ, ಟ್ರಂಪ್ ಆರೋಗ್ಯ ಕುರಿತ ಹೇಳಿಕೆಯನ್ನು ‘ಹಾಸ್ಯಾಸ್ಪದ’ ಎಂದು ‌ತಳ್ಳಿಹಾಕಲಾಗಿದೆ.

ಜೆರುಸಲೇಂ ಕುರಿತು ಬುಧವಾರ ಮಾಡಿದ್ದ ಭಾಷಣದ ಕೊನೆಯಲ್ಲಿ 71 ವರ್ಷದ ಟ್ರಂಪ್ ಅಸ್ಪಷ್ಟವಾಗಿ ಮಾತನಾಡಿದ್ದರು ಮತ್ತು ‘ಗಾಡ್ ಬ್ಲೆಸ್ ಅಮೆರಿಕ’ ಎಂದು ತಪ್ಪಾಗಿ ಉಚ್ಚರಿಸಿದ್ದರು. ಇದರಿಂದ ಅವರ ಆರೋಗ್ಯ ಕುರಿತು ಅನುಮಾನ ವ್ಯಕ್ತವಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.