ಮುಂಬೈ: ನಷ್ಟದಲ್ಲಿರುವ ಏರ್ ಇಂಡಿಯಾ ಸಂಸ್ಥೆಯ ದುಡಿಯುವ ಬಂಡವಾಳಕ್ಕಾಗಿ, ಅಲ್ಪಾವಧಿಗೆ ₹ 1,500 ಕೋಟಿ ಸಾಲ ಪಡೆಯಲು ಮುಂದಾಗಿದೆ.

ಉದ್ದೇಶಿತ ಸಾಲ ಪಡೆಯಲು ಸಂಸ್ಥೆಯು ಸರ್ಕಾರದ ಖಾತರಿಗಾಗಿ ಎದುರು ನೋಡುತ್ತಿದೆ ಎಂದು ಬಿಡ್‌ಗಾಗಿ ಸಲ್ಲಿಸಿರುವ ದಾಖಲೆ ಪತ್ರದಲ್ಲಿ ಹೇಳಲಾಗಿದೆ.

ಸಾಲ ನೀಡಲು ಆಸಕ್ತಿ ಇರುವ ಬ್ಯಾಂಕ್‌ಗಳು ಡಿಸೆಂಬರ್ 12ರ ಒಳಗಾಗಿ ಬಿಡ್ ಸಲ್ಲಿಸಬೇಕು. ಅದರಲ್ಲಿ ಸಾಲದ ಮೊತ್ತವನ್ನೂ ನಮೂದಿಸಿರಬೇಕು. ಸಾಲ ಮರುಪಾವತಿ ಅವಧಿಯನ್ನು 2018ರ ಜೂನ್‌ಗೆ ನಿಗದಿ ಮಾಡಲಾಗಿದೆ. ಅವಧಿ ವಿಸ್ತರಣೆ ಮಾಡುವ ಸಾಧ್ಯತೆಯೂ ಇದೆ.

ಏರ್ ಇಂಡಿಯಾ ₹ 52,000 ಕೋಟಿ ಸಾಲ ಬಾಕಿ ಉಳಿಸಿಕೊಂಡಿದೆ. ಹೀಗಾಗಿ 2032ರವರೆಗೆ ಏರ್‌ಇಂಡಿಯಾಗೆ ₹ 50 ಸಾವಿರ ಕೋಟಿ ಬಂಡವಾಳ ನೆರವು ನೀಡುವುದಾಗಿ ಹಿಂದಿನ ಯುಪಿಎ ಸರ್ಕಾರ ಭರವಸೆ ನೀಡಿತ್ತು. ಇದರಲ್ಲಿ ಸರ್ಕಾರ ಈಗಾಗಲೇ ₹ 24,000 ಕೋಟಿ ನೀಡಿದೆ. ಇನ್ನುಳಿದ ಮೊತ್ತವನ್ನು ಷೇರು ವಿಕ್ರಯದ ಮೂಲಕ ನೀಡಲಿದೆ.

ಏರ್ ಇಂಡಿಯಾ ಮತ್ತು ಅದರ ಐದು ಅಂಗ ಸಂಸ್ಥೆಗಳ ಷೇರು ವಿಕ್ರಯ ಮಾಡಲು ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದ ಸಚಿವರ ತಂಡ ಷೇರು ವಿಕ್ರಯದ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.