ಮೂಡುಬಿದಿರೆ (ದಕ್ಷಿಣ ಕನ್ನಡ): ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಮುಕ್ತಾಯಗೊಂಡ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ನ ಮಹಿಳೆಯರ ಹ್ಯಾಮರ್ ಥ್ರೋದಲ್ಲಿ ರಾಷ್ಟ್ರೀಯ ತಾನ್ಯಾ ಚೌಧರಿ ದಾಖಲೆಯ ಸಾಧನೆ ಮಾಡಿದರೂ ಮಾನ್ಯತೆಯ ಹಾದಿ ಕಠಿಣವಾಗಿದೆ ಎನ್ನಲಾಗಿದೆ.

ಶುಕ್ರವಾರ ಬೆಳಿಗ್ಗೆ ನಡೆದ ಹ್ಯಾಮರ್ ಥ್ರೋದಲ್ಲಿ ಚಂಡೀಗಢ ವಿವಿಯ ತಾನ್ಯಾ 65.60 ಮೀ ಸಾಧನೆ ಮಾಡಿದ್ದರು. 2023ರಲ್ಲಿ ಮೀರಟ್ನ ಚೌಧರಿ ಚರಣ್ ಸಿಂಗ್ ವಿವಿಯಲ್ಲಿದ್ದಾಗ ತಾವೇ ಮಾಡಿದ್ದ 62.62 ಮೀಟರ್ಸ್ ಸಾಧನೆಯನ್ನು ಅವರು ಹಿಂದಿಕ್ಕಿದ್ದರು. 2017ರ ಫೆಡರೇಷನ್ ಕಪ್ ಕೂಟದಲ್ಲಿ ಉತ್ತರ ಪ್ರದೆಶದ ಸರಿತಾ ಸಿಂಗ್ (65.25ಮೀ) ಮಾಡಿದ್ದ ರಾಷ್ಟ್ರೀಯ ದಾಖಲೆಯನ್ನು ಕೂಡ ತಾನ್ಯಾ ಹಿಂದಿಕ್ಕಿದ್ದರು. ಆದರೆ ಅಂತರ ವಾರ್ಸಿಟಿ ಕೂಟಕ್ಕೆ ಭಾರತ ಅಥ್ಲೆಟಿಕ್ ಫೆಡರೇಷನ್ನ (ಎಎಫ್ಐ) ಮಾನ್ಯತೆ ಇಲ್ಲದ ಕಾರಣ ಈ ದಾಖಲೆಯನ್ನು ಪರಿಗಣಿಸುವುದು ಕಷ್ಟಸಾಧ್ಯ ಎನ್ನಲಾಗಿದೆ.

ಎಎಫ್ಐ ಮಾನ್ಯತೆ ಇರುವ ಕೂಟಗಳಲ್ಲಿ ಉದ್ದೀಪನ ಮದ್ದು ಸೇವನೆಗೆ ಸಂಬಂಧಪಟ್ಟ ಪರೀಕ್ಷೆಯೂ ಇರುತ್ತದೆ. ಮೂಡುಬಿದಿರೆಯಲ್ಲಿ ನಡೆದ ಕೂಟದಲ್ಲಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದ (ನಾಡಾ) ಅಧಿಕಾರಿಗಳು ಇದ್ದರು. ಎಎಫ್ಐ ಕಳುಹಿಸಿದ 15 ಮಂದಿ ಅಧಿಕಾರಿಗಳ ತಂಡವೂ ಇತ್ತು. ಆದರೆ ಶುಕ್ರವಾರ ತಾನ್ಯಾ ಅವರ ಮಾದರಿಯನ್ನು ಪಡೆದುಕೊಂಡಿಲ್ಲ ಎಂದು ಸ್ವತಃ ಅಥ್ಲೀಟ್ ಹೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಎಎಫ್ಐ ಅಧಿಕಾರಿಗಳ ತಂಡದ ಪ್ರಮುಖ ಹರಿದಾಸ್, ‘ತಾನ್ಯಾ ಸಾಧನೆ ಮಾಡಿರುವುದು ನಿಜ. ಅದನ್ನು ದಾಖಲೆ ಎಂದು ಎಎಫ್ಐ ಪರಿಗಣಿಸಬೇಕಾದರೆ ಹಲವು ಪ್ರಕ್ರಿಯೆಗಳಿಗೆ ಒಳಗಾಗಬೇಕು. ಮೊತ್ತಮೊದಲು ನಾಡಾದಿಂದ ಡೋಪ್ ಟೆಸ್ಟಿಂಗ್ ಆಗಬೇಕು. ಅವರು ಕೊಟ್ಟ ವರದಿಯಲ್ಲಿ ಉದ್ದೀಪನ ಮದ್ದು ಸೇವಿಸಿಲ್ಲ ಎಂಬುದು ಖಾತರಿಯಾದ ನಂತರವಷ್ಟೇ ಮುಂದಿನ ಪ್ರಕ್ರಿಯೆಗಳು ನಡೆಯಲಿವೆ. ತಾವು ಆಯೋಜಿಸಿದ್ದ ಕೂಟದಲ್ಲಿ ದಾಖಲೆಯೊಂದು ಆಗಿದ್ದು ಅದನ್ನು ಮಾನ್ಯ ಮಾಡಬೇಕು ಎಂದು ರಾಜೀವ ಗಾಂಧಿ ವಿವಿ ಎಎಫ್ಐಗೆ ಮನವಿ ಮಾಡಬಹುದಾಗಿದೆ’ ಎಂದರು.

2023ರ ಏಷ್ಯನ್ ಗೇಮ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ತಾನ್ಯಾ 7ನೇ ಸ್ಥಾನ ಪಡೆದಿದ್ದರು. ಕಳೆದ ವರ್ಷ ಆಗಸ್ಟ್ನಲ್ಲಿ ಚೆನ್ನೈಯಲ್ಲಿ ನಡೆದಿದ್ದ ರಾಷ್ಟ್ರೀಯ ಕೂಟದಲ್ಲಿ 63.91 ಮೀಟರ್ಸ್ ಸಾಧನೆಯೊಂದಿಗೆ ಚಿನ್ನ ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.