ಶುಕ್ರವಾರ, ಫೆಬ್ರವರಿ 26, 2021
27 °C

ಧೈರ್ಯವಿದ್ದರೇ ವರುಣಾ ಕ್ಷೇತ್ರದಲ್ಲಿ ಸದಾನಂದಗೌಡರೇ ಸ್ಪರ್ಧಿಸಲಿ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧೈರ್ಯವಿದ್ದರೇ ವರುಣಾ ಕ್ಷೇತ್ರದಲ್ಲಿ ಸದಾನಂದಗೌಡರೇ ಸ್ಪರ್ಧಿಸಲಿ: ಸಿದ್ದರಾಮಯ್ಯ

ಬೆಂಗಳೂರು: ‘ಮೈಸೂರಿನ ವರುಣಾ ಕ್ಷೇತ್ರದಲ್ಲಿ ಪಕ್ಷ ಟಿಕೆಟ್ ನೀಡಿದರೆ ನನ್ನ ಮಗ ಸ್ಪರ್ಧೆ ಮಾಡುತ್ತಾನೆ. ಧೈರ್ಯವಿದ್ದರೆ ಎದುರಾಳಿಯಾಗಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಸ್ಪರ್ಧೆ ಮಾಡಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

‘ಸದಾನಂದಗೌಡರಿಗೆ ಕ್ಷೇತ್ರದ ಉಸ್ತುವಾರಿ ನೀಡಿದ ಕೂಡಲೇ ನನಗೇಕೆ ನಡುಕ ಉಂಟಾಗುತ್ತದೆ? ‌ಕ್ಷೇತ್ರದ ಬಗ್ಗೆ ಅವರಿಗೇನು ಗೊತ್ತಿದೆ? ಕಳೆದ ಬಾರಿ 32,000 ಮತಗಳ ಅಂತರದಲ್ಲಿ ಗೆದ್ದಿದ್ದೇನೆ. ಸದಾನಂದಗೌಡರಿಗೆ ಕ್ಷೇತ್ರದ ಉಸ್ತುವಾರಿ ನೀಡಿದ ಕೂಡಲೇ ಬದಲಾವಣೆ ಆಗುತ್ತದೆಯೇ’ ಎಂದು ಮಾಧ್ಯಮ ಪ್ರತಿನಿಧಿಗಳನ್ನು ಪ್ರಶ್ನಿಸಿದರು.

‘ಬಿಜೆಪಿಗೆ ಅಷ್ಟು ಅನುಕೂಲವಿದ್ದರೆ ಬೇರೆಯವರನ್ನು ನಿಲ್ಲಿಸಿ ಬಲಿಕೊಡುವ ಬದಲು ಸದಾನಂದಗೌಡರೇ ಸ್ಪರ್ಧೆ ಮಾಡಲಿ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.