ಶುಕ್ರವಾರ, ಮಾರ್ಚ್ 5, 2021
27 °C

ಶಾರುಖ್‌ಗೆ ಶುಕ್ರದೆಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾರುಖ್‌ಗೆ ಶುಕ್ರದೆಸೆ

ಮುಂದಿನ ವರ್ಷ ತೆರೆಕಾಣಲಿರುವ ಚಿತ್ರಗಳ ಸಾಲಿನಲ್ಲಿ ಶಾರುಖ್ ಖಾನ್‌, ಕತ್ರಿನಾ ಕೈಫ್‌ ಮತ್ತು ಅನುಷ್ಕಾ ಶರ್ಮಾ ಅಭಿನಯದ ಚಿತ್ರವೂ ಒಂದು. ಆನಂದ್‌ಲಾಲ್‌ ಎಲ್‌. ರಾಯ್‌ ನಿರ್ದೇಶನದ ಈ ಚಿತ್ರದ ಶೀರ್ಷಿಕೆಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಶಾರುಖ್ ಖಾನ್‌ಗೆ ಈ ಚಿತ್ರ ಶುಕ್ರದೆಸೆ ತರಲಿದೆ ಎಂದು ಲೆಕ್ಕಾಚಾರ ಹಾಕಿದ್ದಾರೆ ಬಿ ಟೌನ್‌ ಪಂಡಿತರು.

ಇದೇ ಮೊದಲ ಬಾರಿಗೆ ಕುಳ್ಳನ ಪಾತ್ರದಲ್ಲಿ ಶಾರುಕ್‌ ಕಾಣಿಸಿಕೊಂಡಿರುವುದು ಮೊದಲ ಕಾರಣವಾದರೆ, ಆನಂದ್‌ ರಾಯ್‌ ನಿರ್ದೇಶನ ಮತ್ತು ಭರ್ಜರಿ ಹಾಡುಗಳು ಮತ್ತೊಂದು ಕಾರಣ ಎನ್ನಲಾಗಿದೆ.

ಎರಡು ವರ್ಷಗಳಿಂದೀಚೆ ಹಿಟ್‌ ಚಿತ್ರಗಳನ್ನು ನೀಡಲು ಸೋತಿರುವ ಶಾರುಖ್ ಹೊಸ ಬ್ರೇಕ್‌ಗಾಗಿ ಕಾಯುತ್ತಿದ್ದರು. ಆನಂದ್‌ ರಾಯ್‌ ಚಿತ್ರ ಅಂತಹ ಬ್ರೇಕ್‌ ನೀಡಲಿದೆ ಎಂದು ಖಾನ್‌ ಅಭಿಮಾನಿಗಳೂ ಕಾಯುತ್ತಿದ್ದಾರೆ. ಈ ಹಿಂದೆ, ಚಿತ್ರಕ್ಕೆ ‘ಕತ್ರಿನಾ ಮೇರಿ ಜಾನ್‌’ ಎಂಬ ಹೆಸರಿಟ್ಟಿರುವುದಾಗಿ ಹೇಳಲಾಗಿತ್ತು. ಆದರೆ ಈ ತರ್ಕ ಸತ್ಯವಲ್ಲ ಎಂದು ಕತ್ರಿನಾ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.