ಪ್ರಾಮಾಣಿಕತೆ ಮೆರೆದ ಅಂಚೆ ನೌಕರ

ಗುಂಡ್ಲುಪೇಟೆ: ದಾರಿಯಲ್ಲಿ ಸಿಕ್ಕಿದ ₹18,000 ಮೌಲ್ಯದ ಮೊಬೈಲ್ ಅನ್ನು ವಾರಸುದಾರರಿಗೆ ತಲುಪಿಸುವ ಮೂಲಕ ಅಂಚೆ ಇಲಾಖೆ ನೌಕರ ಪ್ರಾಮಾಣಿಕತೆ ಮೆರೆದಿದ್ದಾರೆ.
ಪೋಸ್ಟ್‌ಮ್ಯಾನ್ ನಾಗರಾಜು ಬೇಗೂರಿನಲ್ಲಿ ಶನಿವಾರ ರಾತ್ರಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮೊಬೈಲ್ ದೊರೆತಿತ್ತು. ಅದರಲ್ಲಿದ್ದ ಸಂಖ್ಯೆಗಳಿಗೆ ಕರೆ ಮಾಡಿ ವಾರಸುದಾರರನ್ನು ಪತ್ತೆ ಹಚ್ಚಿದರು.
ನಂಜನಗೂಡಿನ ನವಿಲೂರು ಗ್ರಾಮದ ರವಿ ಮೊಬೈಲ್ ಕಳೆದು ಕೊಂಡಿದ್ದವರು. ಬೆಳಿಗ್ಗೆ ಬೇಗೂರಿಗೆ ತೆರಳಿದ ರವಿ ಅವರಿಗೆ ನಾಗರಾಜು ಮೊಬೈಲ್‌ಅನ್ನು ಒಪ್ಪಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.