ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ಸಾಸ್‌ ಶೂಟೌಟ್‌ನಲ್ಲಿ ಭಾರತೀಯ ಪ್ರಜೆಯ ರಕ್ಷಣೆಗೆ ಮುಂದಾದ ಇಯಾನ್‌ ಗ್ರಿಲ್ಲಟ್‌ಗೆ ಟೈಮ್‌ ಮ್ಯಾಗಜಿನ್‌ ಗೌರವ

Last Updated 11 ಡಿಸೆಂಬರ್ 2017, 7:41 IST
ಅಕ್ಷರ ಗಾತ್ರ

ಹೋಸ್ಟನ್‌: ಕನ್ಸಾಸ್‌ನಲ್ಲಿ ಜನಾಂಗೀಯ ದ್ವೇಷದ ಹಿನ್ನೆಲೆ ವ್ಯಕ್ತಿಯೊಬ್ಬ ಭಾರತೀಯ ಪ್ರಜೆಯ ಮೇಲೆ ಗುಂಡಿನ ದಾಳಿ ನಡೆಸಲು ಮುಂದಾದಾಗ ಅಡ್ಡ ಬಂದು ಗುಂಡೇಟಿನಿಂದ ಗಾಯಗೊಂಡಿದ್ದ ಅಮೆರಿಕ ಪ್ರಜೆ ಇಯಾನ್ ಗ್ರಿಲ್ಲಟ್(24) ಟೈಮ್‌ ಮ್ಯಾಗಜಿನ್‌ ವಿಶೇಷ ಗೌರವ ಸಲ್ಲಿಸಿದೆ.

ಟೈಮ್‌ ಮ್ಯಾಗಜಿನ್ ಪ್ರಕಟಿಸಿರುವ ‘2017ರಲ್ಲಿ ವಿಶ್ವಾಸ ತುಂಬಿದ ಐವರು ನಾಯಕರು’ ಪೈಕಿ ಇಯಾನ್‌ ಕೂಡ ಒಬ್ಬರು.

ಜನಾಂಗ, ವರ್ಣ, ಧರ್ಮ ಮತ್ತು ರಾಷ್ಟ್ರೀಯತೆಗೆ ಸಂಬಂಧಿಸಿದಂತೆ ಕಿರುಚಾಡಿದ್ದ ಆಡಮ್ ಪುರಿಟನ್ ಹೈದರಾಬಾದ್‌ ಮೂಲದ ಎಂಜಿನಿಯರ್ ಶ್ರೀನಿವಾಸ ಕೂಚಿಬೊಟ್ಲಾ(32) ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದ.

2017ರ ಫೆಬ್ರುವರಿ 22ರಂದು ಅಮೆರಿಕದ ಕನ್ಸಾಸ್ ನಗರದ ಆಸ್ಟಿನ್ ಬಾರ್‌ನಲ್ಲಿ ‘ನನ್ನ ದೇಶ ಬಿಟ್ಟು ಹೊರನಡೆಯಿರಿ’ ಎಂದು ಕೂಗುತ್ತ ಆಡಮ್‌ ನಡೆಸಿದ ಗುಂಡಿನ ದಾಳಿಯಲ್ಲಿ ಶ್ರೀನಿವಾಸ ಹಾಗೂ ವರಂಗಲ್‌ನ ಅಕೋಲ್ ಮೇಡಸಾನಿ ಅವರ ರಕ್ಷಣೆಗೆ ಮುಂದಾದ ಇಯಾನ್ ಗ್ರಿಲ್ಲಟ್  ಗಾಯಗೊಂಡಿದ್ದರು.

ಇಯಾನ್‌ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಇಂಡಿಯನ್‌–ಅಮೆರಿಕನ್‌ ಸಮುದಾಯ ‘ಎ ಟ್ರೂ ಅಮೆರಿಕನ್‌ ಹೀರೋ’ ಬಿರುದು ಹಾಗೂ 1 ಲಕ್ಷ ಅಮೆರಿಕನ್‌ ಡಾಲರ್‌ ನೀಡಿ ಗೌರವಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT