ಭಾನುವಾರ, ಫೆಬ್ರವರಿ 28, 2021
23 °C
ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ

ಜೀವಮಾನ ಗೌರವ ಪುರಸ್ಕಾರಕ್ಕೆ ಪ್ರಸನ್ನ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೀವಮಾನ ಗೌರವ ಪುರಸ್ಕಾರಕ್ಕೆ ಪ್ರಸನ್ನ ಆಯ್ಕೆ

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿ ಕೊಡಮಾಡುವ 2017ನೇ ಸಾಲಿನ ಜೀವಮಾನದ ಗೌರವ ಪ್ರಶಸ್ತಿಗೆ ಹಿರಿಯ ರಂಗಕರ್ಮಿ ಪ್ರಸನ್ನ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ₹ 50 ಸಾವಿರ ಒಳಗೊಂಡಿದೆ.

ಮಂಡ್ಯ ರಮೇಶ್‌, ನಾಗೇಶ್‌ ಕಶ್ಯಪ್‌, ಎಲ್‌.ಎನ್‌.ಮುಕುಂದ್‌ರಾಜ್‌, ನಾಗಣಿ ಭರಣ ಸೇರಿ 25 ರಂಗಕರ್ಮಿಗಳಿಗೆ ಅಕಾಡೆಮಿಯ ವಾರ್ಷಿಕ ರಂಗಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಈ ಪ್ರಶಸ್ತಿ ತಲಾ ₹ 25 ಸಾವಿರ ಒಳಗೊಂಡಿದೆ.

ಕೆ.ಹಿರಣ್ಯಯ್ಯ ದತ್ತಿ ಪುರಸ್ಕಾರಕ್ಕೆ ರಂಗನಟ ಚೌಡಪ್ಪ ದಾಸ್‌, ಚಿಂದೋಡಿ ವೀರಪ್ಪನವರ ದತ್ತಿ ಪ್ರಶಸ್ತಿಗೆ ನಿರ್ದೇಶಕ ಬಸವರಾಜ ಬೆಂಗೇರಿ, ಚಿಂದೋಡಿ ಲೀಲಾ ದತ್ತಿ ಪುರಸ್ಕಾರಕ್ಕೆ ರಂಗಭೂಮಿ ನಟಿ ಮನೋರಂಜನ ಸಿಂಧೆ ಹಾಗೂ ಕೆ.ರಾಮಚಂದ್ರಯ್ಯ ದತ್ತಿ ಪುರಸ್ಕಾರಕ್ಕೆ ನಟ ಮಾಯಿಗಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪುರಸ್ಕಾರಗಳು ತಲಾ ₹ 5 ಸಾವಿರ ನಗದನ್ನು ಒಳಗೊಂಡಿವೆ.

ಈ ಎಲ್ಲ ಪ್ರಶಸ್ತಿಗಳ ಪ್ರದಾನ ಸಮಾರಂಭವನ್ನು 2018ರ ಫೆಬ್ರುವರಿಯಲ್ಲಿ, ಬೆಂಗಳೂರಿನಲ್ಲಿ ನಡೆಸಲಾಗುತ್ತದೆ ಎಂದು ಅಕಾಡೆಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.