ಭಾನುವಾರ, ಫೆಬ್ರವರಿ 28, 2021
30 °C

ಮಾಸ್‌, ಮಸಾಲಾ ಹೂರಣದ ‘ಮಿಡ್ಲ್‌ ಕ್ಲಾಸ್‌...’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್‌, ಮಸಾಲಾ ಹೂರಣದ ‘ಮಿಡ್ಲ್‌ ಕ್ಲಾಸ್‌...’

ಕ್ರಿಸ್ಮಸ್‌ ಮತ್ತು ಹೊಸ ವರ್ಷದ ಹೊಸ್ತಿಲಲ್ಲಿ ತೆಲುಗಿನಲ್ಲಿ ಮತ್ತೊಂದು ‘ಮಾಸ್‌’ ಸಿನಿಮಾ ಬರುವುದು ಈಗ ಸ್ಪಷ್ಟವಾಗಿದೆ. ಇದೇ 21ರಂದು ಬಿಡುಗಡೆಯಾಗಲಿರುವ ಬಹುನಿರೀಕ್ಷೆಯ ಚಿತ್ರ ‘ಮಿಡ್ಲ್‌ ಕ್ಲಾಸ್‌ ಅಬ್ಬಾಯಿ (ಎಂಸಿಎ) ಟ್ರೇಲರ್‌ ನೋಡಿದವರಿಗೆ ಅಂತಹುದೊಂದು ಮಹತ್ವಾಕಾಂಕ್ಷೆ ಕಾಣಿಸಿಕೊಂಡಿದೆ.

ಸಾಯಿ ಪಲ್ಲವಿ ಎಂದಿನಂತೆ ಲವಲವಿಕೆಯಿಂದ ನಟಿಸಿದ್ದಾರೆ. ಮಾಸ್‌ ಹೀರೊನ ಎಲ್ಲಾ ಸದ್ಗುಣಗಳನ್ನೂ ಹೊಂದಿರುವ ಯುವಕ ಅಬ್ಬಾಯಿ ಆಗಿ ನಾನಿ ಕಾಣಿಸಿಕೊಂಡಿದ್ದಾರೆ. ನಡುರಸ್ತೆಯಲ್ಲೇ ತನ್ನ ಕನಸಿನ ಹುಡುಗನಿಗೆ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾಳೆ ನಾಯಕಿ. ನಾಯಕನಿಗೆ, ತನ್ನ ಅಣ್ಣನ ಮಾತಿನಂತೆ ಅತ್ತಿಗೆಯ ಜತೆ ಒಂಟಿಯಾಗಿ ಒಂದೇ ಮನೆಯಲ್ಲಿ ಇರಬೇಕಾದ ಅನಿವಾರ್ಯತೆ. ಈ ಮಧ್ಯೆ ಒಂದಿಷ್ಟು ಮಸಾಲಾ ಮತ್ತು ಹೊಡೆದಾಟವೂ ಇರಲೇಬೇಕಲ್ಲ? ಮಧ್ಯಮ ವರ್ಗದ ಜನರ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂಬ ಸಂದೇಶ ರವಾನಿಸುವ ಖಡಕ್‌ ಹೀರೊ ಆಗಿ ನಾನಿ ತಮ್ಮ ಪಾತ್ರವನ್ನು ಮನೋಜ್ಞವಾಗಿ ನಿರ್ವಹಿಸಿದ್ದಾರೆ.

ಸಾಯಿ ಪಲ್ಲವಿ ಮತ್ತು ಭೂಮಿಕಾ ಚಾವ್ಲಾ ಜತೆಗೆ ನಾನಿ ಕೆಮಿಸ್ಟ್ರಿಯನ್ನು ನಿರ್ದೇಶಕ ಶ್ರೀರಾಮ್‌ ವೇಣು ಚೆನ್ನಾಗಿಯೇ ಚಿತ್ರಿಸಿರುವುದು ಚಿತ್ರದ ಮತ್ತೊಂದು ಆಕರ್ಷಣೆ. ಮಾಸ್‌ ಮತ್ತು ಮತ್ತು ಮಸಾಲಾ ಸಿನಿಮಾ ಎಂಬ ಕಾರಣಕ್ಕೆ ‘ಎಂಸಿಎ’ ಸುದ್ದಿ ಮಾಡುತ್ತಿದೆ.

ಅಷ್ಟೇ ಅಲ್ಲ, ‘ಎಂಸಿಎ’ನಿಂದ ನಟ ನಾನಿ ನಿರೀಕ್ಷೆಯಂತೆ ದೊಡ್ಡ ಬ್ರೇಕ್‌ ಗಿಟ್ಟಿಸಿಕೊಳ್ಳುತ್ತಾರೆ ಹಾಗೂ ಸಾಯಿ ಪಲ್ಲವಿ ತಮಿಳು ಚಿತ್ರರಂಗದಲ್ಲಿ ಹೊಸ ಅಧ್ಯಾಯ ಬರೆಯುತ್ತಾರೆ ಎಂಬ ಲೆಕ್ಕಾಚಾರದ ಮಾತುಗಳೂ ಕೇಳಿಬರುತ್ತಿವೆ. ಮಧ್ಯಮ ವರ್ಗದ ಪ್ರೇಕ್ಷಕರನ್ನೇ ಗುರಿಯಾಗಿಟ್ಟುಕೊಂಡು ನಿರ್ಮಿಸಲಾಗಿರುವ ಈ ಚಿತ್ರ ಬಾಕ್ಸಾಫೀಸ್‌ ಕೊಳ್ಳೆ ಹೊಡೆಯುವುದರಲ್ಲಿ ಸಂಶಯವಿಲ್ಲ ಎಂದು ನಿರೀಕ್ಷಿಸಲಾಗಿದೆ. ಅತ್ತಿಗೆಯ ಪಾತ್ರದಲ್ಲಿ ಭೂಮಿಕಾ ಚಾವ್ಲಾ ಕಾಣಿಸಿಕೊಂಡಿದ್ದಾರೆ. ದಿಲ್‌ ರಾಜು ನಿರ್ಮಾಣದ ‘ಮಿಡ್ಲ್‌ಕ್ಲಾಸ್‌ ಅಬ್ಬಾಯಿ’ಗೆ ಹಿಟ್‌ ಚಿತ್ರಗಳ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್‌ ಅವರ ಸಂಗೀತವಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.