ಜಪಾನ್ ಬುಲೆಟ್ ರೈಲಿನಲ್ಲಿ ಬಿರುಕು ಪತ್ತೆ: ತಪ್ಪಿದ ಅನಾಹುತ

ಟೋಕಿಯೊ: ಇಲ್ಲಿನ ಬುಲೆಟ್ ರೈಲಿನಲ್ಲಿ ಬಿರುಕೊಂದು ಪತ್ತೆಯಾಗಿದ್ದು, ಭಾರಿ ಅನಾಹುತ ತಪ್ಪಿದೆ. ‘ಇಂತಹ ಗಂಭೀರವಾದ ದೋಷ ಕಾಣಿಸಿಕೊಂಡಿರುವುದು ಇದೇ ಮೊದಲು’ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ದಕ್ಷಿಣ ಜಪಾನ್‌ನ ನಿಲ್ದಾಣವೊಂದರಿಂದ ಹೊರಟ ಶಿನ್ಕಾನ್‌ಸೆನ್ ಬುಲೆಟ್ ರೈಲಿನಲ್ಲಿ ವಿಚಿತ್ರ ಶಬ್ದ ಹಾಗೂ ಸುಟ್ಟ ವಾಸನೆ ಬರುತ್ತಿರುವುದು ಸಿಬ್ಬಂದಿ ಗಮನಕ್ಕೆ ಬಂದಿದೆ. ನಗೋಯಾ ನಿಲ್ದಾಣದಲ್ಲಿ ರೈಲನ್ನು ನಿಲುಗಡೆಗೊಳಿಸಿ ಪರಿಶೀಲಿಸಿದಾಗ ಅಡಿಭಾಗದಲ್ಲಿ ಬಿರುಕು ಪತ್ತೆಯಾಗಿದೆ. ಜೊತೆಗೆ ತೈಲ ಸೋರಿಕೆಯೂ ಕಂಡು ಬಂದಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಇದೊಂದು ಅಪರೂಪದ ಪ್ರಕರಣ. ಇದರಿಂದ ರೈಲು ಹಳಿ ತಪ್ಪುವ ಸಾಧ್ಯತೆ ಇತ್ತು’ ಎಂದು ಜಪಾನ್‌ನ ಸಾರಿಗೆ ಸುರಕ್ಷಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
‘ಸುಮಾರು 1,000 ಪ್ರಯಾಣಿಕರು ಈ ರೈಲಿನಲ್ಲಿದ್ದರು. ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ’ ಎಂದಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.