ವಿಮಾನದಲ್ಲಿ ಅಂತರ್ಜಾಲ ಸಂಪರ್ಕ ಶೀಘ್ರ

ನವದೆಹಲಿ: ಹಾರುತ್ತಿರುವ ವಿಮಾನದಲ್ಲಿ ಮೊಬೈಲ್ ಮತ್ತು ಅಂತರ್ಜಾಲ ಸಂಪರ್ಕ ಪಡೆಯಲು ಶೀಘ್ರವೇ ಅವಕಾಶ ದೊರೆಯಲಿದೆ. ಈ ಬಗ್ಗೆ ಈ ತಿಂಗಳ ಕೊನೆಯೊಳಗೆ ಸರ್ಕಾರಕ್ಕೆ ಶಿಫಾರಸು ಸಲ್ಲಿಸಲಾಗುವುದು ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಅಧ್ಯಕ್ಷ ಆರ್.ಎಸ್. ಶರ್ಮಾ ಅವರು ಹೇಳಿದ್ದಾರೆ.
‘ವಿಮಾನದೊಳಗೆ ಅಂತರ್ಜಾಲ ಸಂಪರ್ಕ ಪಡೆಯಲು ಅವಕಾಶ ನೀಡಲಾಗುವುದು. ಶಿಫಾರಸಿನಲ್ಲಿ ಅದಕ್ಕೆ ಬೇಕಾದ ಮಾರ್ಗದರ್ಶಿ ಸೂತ್ರಗಳನ್ನು ಕೊಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.
ವಿಮಾನದಲ್ಲಿ ಅಂತರ್ಜಾಲ ಸಂಪರ್ಕ ಬೇಕು ಎಂಬ ಬೇಡಿಕೆ ಹೆಚ್ಚುತ್ತಲೇ ಇದೆ. ಹಾಗಾಗಿ ನಾಗರಿಕ ವಿಮಾನಯಾನ ಉದ್ಯಮಕ್ಕೆ ಸಂಬಂಧಿಸಿದವರ ಅಭಿಪ್ರಾಯಗಳನ್ನು ಟ್ರಾಯ್ ಸಂಗ್ರಹಿಸಿದೆ.
ಟ್ರಾಯ್‌ನ ಶಿಫಾರಸು ಆಧರಿಸಿ ದೂರಸಂಪರ್ಕ ಸಚಿವಾಲಯವು ನಿಯಮಗಳನ್ನು ರೂಪಿಸಲಿದೆ. ಇದು ಈ ತಿಂಗಳ ಕೊನೆಗೆ ಜಾರಿಯಾಗುವ ಸಾಧ್ಯತೆ ಹೆಚ್ಚು. ಒಂದು ವೇಳೆ ವಿಳಂಬವಾದರೂ 2018ರ ಮಾರ್ಚ್‌ನೊಳಗೆ ಜಾರಿಗೆ ಬರಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.