ಮಂಗಳವಾರ, ಮಾರ್ಚ್ 2, 2021
27 °C

ಜೈಲುಗಳಲ್ಲಿ ನೈರ್ಮಲ್ಯ ಕೊರತೆ: ಮಲ್ಯ

ಪಿಟಿಐ Updated:

ಅಕ್ಷರ ಗಾತ್ರ : | |

ಜೈಲುಗಳಲ್ಲಿ ನೈರ್ಮಲ್ಯ ಕೊರತೆ: ಮಲ್ಯ

ಲಂಡನ್: ಭಾರತದಲ್ಲಿರುವ ಜೈಲುಗಳು ದಟ್ಟಣೆಯಿಂದ ಕೂಡಿದ್ದು, ಅಲ್ಲಿ ನೈರ್ಮಲ್ಯದ ಕೊರತೆ ಇದೆ ಎಂದು ಉದ್ಯಮಿ ವಿಜಯ್ ಮಲ್ಯ ಅವರ ಪರ ವಕೀಲರು ಗುರುವಾರ ವಾದ ಮಂಡಿಸಿದರು. ಈ ಮೂಲಕ ಮಲ್ಯ ಹಸ್ತಾಂತರಕ್ಕೆ ಬೇಡಿಕೆ ಇಟ್ಟಿರುವ ಭಾರತಕ್ಕೆ ತಿರುಗೇಟು ನೀಡಿದರು.

ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಕಾರಾಗೃಹಗಳ ಸಲಹೆಗಾರ ಡಾ. ಅಲಾನ್ ಮಿಶೆಲ್ ಅವರು ವಾದ ಮಂಡಿಸಿದರು. ಮುಂಬೈನ ಆರ್ಥರ್‌ ರಸ್ತೆ ಜೈಲಿನ ಸ್ಥಿತಿ ತೃಪ್ತಿಕರವಾಗಿಲ್ಲ ಎಂದ ಅವರು ಕೋಲ್ಕತ್ತದ ಅಲಿಪೊರ್ ಹಾಗೂ ಚೆನ್ನೈನ ಜೈಲುಗಳ ದುಸ್ಥಿತಿಯನ್ನೂ ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.