ಗುರುವಾರ , ಮಾರ್ಚ್ 4, 2021
19 °C

21 ಹಳ್ಳಿಗಳಿಗೆ ಒಬ್ಬ ವೈದ್ಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

21 ಹಳ್ಳಿಗಳಿಗೆ ಒಬ್ಬ ವೈದ್ಯ!

ಬೆಂಗಳೂರು: ಹೆಸರಘಟ್ಟ ಸುತ್ತಮುತ್ತಲ 21 ಹಳ್ಳಿಗಳ ಸುಮಾರು 7,000 ಜನರಿಗೆ ಇರುವುದು ಒಂದೇ ಪ್ರಾಥಮಿಕ ಆರೋಗ್ಯ ಕೇಂದ್ರ. ಅದಕ್ಕೆ ಒಬ್ಬರೇ ವೈದ್ಯರು!

ಹೆಸರಘಟ್ಟ ಹೋಬಳಿಯ ಐವರಕಂಡಪುರದಲ್ಲಿ ಈ ಆರೋಗ್ಯ ಕೇಂದ್ರವಿದೆ. ಒಂದು ವರ್ಷದ ಹಿಂದೆ ಡಾ. ರಮೇಶ್‌ ಎನ್ನುವರು ವರ್ಗವಾಗಿ ತೆರವಾಗಿದ್ದ ಸ್ಥಾನ ಇನ್ನೂ ಖಾಲಿ ಇದೆ. ಸದ್ಯ ಡಾ.ನಳಿನಿ ಒಬ್ಬರೇ ಈ ಆರೋಗ್ಯ ಕೇಂದ್ರವನ್ನು ನಿಭಾಯಿಸುತ್ತಿದ್ದಾರೆ.

‘ರಾತ್ರಿ ಹೊತ್ತು ಯಾವುದಾದರೂ ಅವಘಡ ಸಂಭವಿಸಿದರೆ, ವೈದ್ಯರು ಇರುವುದಿಲ್ಲ. ಇಲ್ಲಿಂದ 7 ಕಿ.ಮೀ ದೂರದ ಚಿಕ್ಕಬಾಣಾವರಕ್ಕೆ ಇಲ್ಲವೇ 18 ಕಿ.ಮೀ ದೂರದ ನೆಲಮಂಗಲಕ್ಕೆ ಹೋಗಬೇಕು’ ಎಂದು ಗ್ರಾಮಸ್ಥರು ದೂರಿದರು.

‘ಪ್ರತಿ ದಿನ ಸುಮಾರು 80 ರೋಗಿಗಳ ತಪಾಸಣೆ ಮಾಡಲಾಗುತ್ತದೆ. ತಿಂಗಳಿಗೆ ಸರಾಸರಿ 14 ಹೆರಿಗೆಗಳು ಇಲ್ಲಿ ಆಗುತ್ತವೆ. ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಹಗಲಿರಳು ಒಬ್ಬರೇ ನಿಭಾಯಿಸಲು ಕಷ್ಟ. ತೆರವಾದ ಸ್ಥಾನಕ್ಕೆ ಸರ್ಕಾರ ಶೀಘ್ರ ವೈದ್ಯರನ್ನು ನೇಮಿಸಬೇಕು’ ಎಂದು ನಳಿನಿ ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಚೊಕ್ಕನಹಳ್ಳಿ ವೆಂಕಟೇಶ್, ‘ವೈದ್ಯರು ಆಸ್ಪತ್ರೆಯ ಹತ್ತಿರವಿದ್ದರೆ, ರಾತ್ರಿ ವೇಳೆ ತಪಾಸಣೆ ಅನುಕೂಲ ಆಗುತ್ತದೆ ಎಂದು ಪಂಚಾಯಿತಿ ವತಿಯಿಂದ ಸುಮಾರು ₹16 ಲಕ್ಷ ವೆಚ್ಚದಲ್ಲಿ ವಸತಿ ಸೌಕರ್ಯ ಕಲ್ಪಿಸಲಾಗಿದೆ. ಆದರೆ, ಆ ಮನೆ ಎರಡು ವರ್ಷದಿಂದ ಖಾಯಿ ಇದೆ’ ಎಂದು ತಿಳಿಸಿದರು.

ಪಂಚಾಯಿತಿಯಿಂದ ಸುಮಾರು ₹16 ಲಕ್ಷ ವೆಚ್ಚದಲ್ಲಿ ವೈದ್ಯರು ಅಸ್ಪತ್ರೆಯ ಹತ್ತಿರ ಇರಲಿ ಎಂದು ವಸತಿಯನ್ನು ಕಟ್ಟಿಸಿದೆ. ಕಳೆದ ಎರಡು ವರ್ಷಗಳಿಂದ ವೈದ್ಯರ ವಸತಿ ನಿಲಯ ಖಾಲಿ ಇದೆ. ಎಂದು ಹೇಳಿದರು.

ಯಲಹಂಕ ಜಿಲ್ಲಾ ವೈದ್ಯಾಧಿಕಾರಿ ರಮೇಶ್ ಬಾಬು, ‘ವೈದ್ಯರ ಸಂಖ್ಯೆ ಕೊರತೆ ಇದೆ. ಸರ್ಕಾರ ನೇಮಕ ಮಾಡಿದರೆ ಎಲ್ಲಾ ಕೇಂದ್ರಗಳಿಗೂ ವೈದ್ಯರನ್ನು ನಿಯೋಜಿಸಬಹುದು’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.