ಬುಧವಾರ, ಮಾರ್ಚ್ 3, 2021
19 °C

ವಡೂರು: ಮತ್ತೊಂದು ಕಾಡಾನೆ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಡೂರು: ಮತ್ತೊಂದು ಕಾಡಾನೆ ಸೆರೆ

ಸಕಲೇಶಪುರ: ತಾಲ್ಲೂಕಿನ ವಡೂರು ಗ್ರಾಮದ ಬೆಂಡೇಕಾಡಿನಲ್ಲಿ ಗುರುವಾರ ಮಧ್ಯಾಹ್ನ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತೊಂದು ಕಾಡಾನೆ ಸೆರೆಹಿಡಿದರು. ಸುಮಾರು 22 ವರ್ಷ ವಯಸ್ಸಿನ ಕಾಡಾನೆಗೆ ಮೂರು ಬಾರಿ ಅರಿವಳಿಕೆ ಚುಚ್ಚುಮದ್ದು ಹಾರಿಸಿದರೂ ಕಾಡಾನೆಯೂ ಪ್ರಜ್ಞೆತಪ್ಪಿ ನೆಲಕ್ಕೆ ಉರುಳಲಿಲ್ಲ.

ಕೊನೆಗೆ ನಿಂತ ಸ್ಥಿತಿಯಲ್ಲಿಯೇ ಪ್ರಜ್ಞೆ ತಪ್ಪಿದೆ ಎಂಬುದನ್ನು ಖಾತರಿಪಡಿಸಿಕೊಂಡ ಅಧಿಕಾರಿಗಳ ಸೂಚನೆ ಆಧರಿಸಿ ಕಾರ್ಯಾಚರಣೆಗೆ ಬಳಸಲಾಗಿದ್ದ ಕುಮ್ಮಿ ಆನೆಗಳ ನೆರವಿನಿಂದ ಹಗ್ಗ ಕಟ್ಟಿ ಸೆರೆಹಿಡಿಯುವಲ್ಲಿ ಸಿಬ್ಬಂದಿ ಯಶಸ್ವಿಯಾದರು. ಸೆರೆಹಿಡಿಯಲಾದ ಆನೆಯನ್ನು ಸಕ್ಕರೆಬೈಲು ಆನೆ ಶಿಬಿರಕ್ಕೆ ಕಳಿಸಲಾಯಿತು.

ಕಾರ್ಯಾಚರಣೆಯಲ್ಲಿ ಬಂಡೀಪುರದ ಅಭಯಾರಣ್ಯದ ಡಾ. ನಾಗರಾಜ್‌, ನಾಗರಹೊಳೆ ಆನೆಧಾಮದ ಡಾ. ಮುಜೀಬ್‌, ಶಿವಮೊಗ್ಗದ ವಿನಯ್‌ಕುಮಾರ್‌  ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಕೆ.ಸಿಂಹ, ಡಿಎಫ್‌ಒ ಮಂಜುನಾಥ್‌, ಎಸಿಎಫ್‌ ಲಿಂಗರಾಜ್‌, ವಲಯ ಅರಣ್ಯ ಅಧಿಕಾರಿ ಮೋಹನ್‌, ಯಸಳೂರು ವಲಯ ಅಧಿಕಾರಿ ಅಭಿಲಾಷ್‌ ಇದ್ದರು. ತಾತ್ಕಾಲಿಕವಾಗಿ ಎರಡು ಕಾಡಾನೆ ಹಿಡಿಯಲು ಸರ್ಕಾರ ಆದೇಶಿಸಿತ್ತು. ಅದರಂತೆ ಅರಣ್ಯ ಇಲಾಖೆ ಎರಡು ಕಾಡಾನೆ ಹಿಡಿದು ಆನೆ ಶಿಬಿರಕ್ಕೆ ಕಳುಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.