ಶುಕ್ರವಾರ, ಫೆಬ್ರವರಿ 26, 2021
22 °C

₹ 1ಕ್ಕೆ ಕುಸಿದ ಟೊಮೆಟೊ ಬೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

₹ 1ಕ್ಕೆ ಕುಸಿದ ಟೊಮೆಟೊ ಬೆಲೆ

ಗುಂಡ್ಲುಪೇಟೆ: ಏಕಾಏಕಿ ಧಾರಣೆ ಕುಸಿದ ಪರಿಣಾಮ ರೈತರು ಟೊಮೆಟೊವನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಸಂಜೆ ಪಟ್ಟಣದ ಎಪಿಎಂಸಿ ಮಾರುಕಟ್ಟೆಗೆ ಟೊಮೆಟೊ ತಂದಿದ್ದರು. ಆದರೆ ಇದ್ದಕ್ಕಿದ್ದಂತೆ ಧಾರಣೆ ಕೆ.ಜಿಗೆ ₹ 1ಕ್ಕೆ ಇಳಿಯಿತು. ಇದರಿಂದ ಆಕ್ರೋಶಗೊಂಡು ರಸ್ತೆಗೆ ಸುರಿದು ಪ್ರತಿಭಟಿಸಿದರು.

ಉತ್ತಮ ಗುಣಮಟ್ಟದ ಟೊಮೆಟೊ ಕೆ.ಜಿಗೆ ₹ 3ರಿಂದ 4ರಂತೆ ಮಾರಾಟವಾಯಿತು. ಸಾಧಾರಣ ಗುಣಮಟ್ಟದ ಸರಕಿನ ಬೆಲೆ ₹ 1ಕ್ಕೆ ಕುಸಿಯಿತು. ಮೂರನೇ ದರ್ಜೆಯ ಟೊಮೆಟೊ ಮಾರಾಟವಾಗದೆ ಉಳಿಯಿತು. ಗುರುವಾರ ಕೆ.ಜಿಗೆ ₹ 6ರಿಂದ 8ಕ್ಕೆ ಮಾರಾಟವಾಗಿತ್ತು. ಕಳೆದ ವಾರ ₹ 12ರಿಂದ 15 ಬೆಲೆ ಇತ್ತು. ಅಕ್ಟೋಬರ್‌, ನವೆಂಬರ್‌ನಲ್ಲಿ ₹ 30–40ರ ವರೆಗೂ ತಲುಪಿತ್ತು.

ರೈತರ ಆಕ್ರೋಶ: ‘ಮಾರುಕಟ್ಟೆಯಲ್ಲಿ ರೈತರ ಬೆಳೆಗೆ ಉತ್ತಮ ಬೆಲೆ ದೊರೆಯುತ್ತಿಲ್ಲ. ನಮ್ಮಿಂದ ಕಡಿಮೆ ಬೆಲೆಗೆ ಖರೀದಿಸಿ ಗ್ರಾಹಕರಿಗೆ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುವ ಮೂಲಕ ಮಧ್ಯವರ್ತಿಗಳು ರೈತರು ಮತ್ತು ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ’ ಎಂದು   ಬೆಳೆಗಾರರು ಆರೋಪಿಸಿದರು.

‘ಬೆಲೆ ಕುಸಿತದಿಂದಾಗಿ ಬರುವ ದರವು ಸಾಗಣೆಯ ಬಾಡಿಗೆಗೂ ಸಾಲುವುದಿಲ್ಲ. ನಮ್ಮ ಶ್ರಮ ವ್ಯರ್ಥವಾಗುತ್ತಿದೆ. ಬೆಲೆ ಇಳಿಕೆ ಸಂದರ್ಭದಲ್ಲಿ ಸರ್ಕಾರ ಮಧ್ಯಪ್ರವೇಶಿಸಿ ಬೆಂಬಲ ಬೆಲೆ ನಿಗದಿ ಮಾಡಬೇಕು. ಸಾಲ ಮಾಡಿ ಟೊಮೆಟೊ ಬೆಳೆದಿದ್ದು, ಸಾಲ ತೀರಿಸಲು ಏನು ಮಾಡುವುದೆಂದು ತಿಳಿಯುತ್ತಿಲ್ಲ’ ಎಂದು ರಾಘವಪುರ ಗ್ರಾಮದ ರೈತ ದೇವಯ್ಯ ನೋವು ತೋಡಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.