5

‘ಕೈಗಾರಿಕಾ ಪಾರ್ಕ್‌ಗೆ ಮತ್ತಷ್ಟು ಭೂಮಿ’

Published:
Updated:
‘ಕೈಗಾರಿಕಾ ಪಾರ್ಕ್‌ಗೆ ಮತ್ತಷ್ಟು ಭೂಮಿ’

ಕಲಬುರ್ಗಿ: ‘ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಉದ್ದೇಶಿತ ಮಹಿಳಾ ಕೈಗಾರಿಕಾ ಪಾರ್ಕ್‌ಗಳಿಗೆ ಕಡಿಮೆ ದರದಲ್ಲಿ ಮತ್ತಷ್ಟು ಭೂಮಿಯನ್ನು ಒದಗಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಕೆ–ಲ್ಯಾಂಪ್‌ ಸಹಯೋಗದಲ್ಲಿ ನಂದೂರಿನ ಕೈಗಾರಿಕಾ ಪ್ರದೇಶದ ಮಹಿಳಾ ಕೈಗಾರಿಕಾ ಪಾರ್ಕ್‌ನ ಸಾಮಾನ್ಯ ಸೌಲಭ್ಯ ಕೇಂದ್ರದ ಕಟ್ಟಡಕ್ಕೆ ಇಲ್ಲಿನ ಐವಾನ್‌–ಇ–ಶಾಹಿ ಅತಿಥಿಗೃಹದ ಆವರಣದಲ್ಲಿ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಕಲಬುರ್ಗಿಯ ಕೈಗಾರಿಕಾ ಪಾರ್ಕ್‌ಗೆ ಈಗಾಗಲೇ 50 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಹೆಚ್ಚುವರಿ ಭೂಮಿಯ ಅಗತ್ಯವಿದ್ದಲ್ಲಿ ತಿಳಿಸಬೇಕು. ಅತಿ ಕಡಿಮೆ ದರದಲ್ಲಿ ಅದನ್ನು ಸಹ ಒದಗಿಸಲು ಸರ್ಕಾರ ಬದ್ಧ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೆಗಳನ್ನು ಆರಂಭಿಸಬೇಕು. ಉದ್ಯಮಿಗಳಾಗಿ ರೂಪುಗೊಳ್ಳಬೇಕು’ ಎಂದರು.

ಅಂಕಿ–ಅಂಶ

50 ಎಕರೆ ವಿಸ್ತೀರ್ಣದ ಕೈಗಾರಿಕಾ ಪಾರ್ಕ್‌

₹7ಕೋಟಿ ವೆಚ್ಚದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ

230 ಕೈಗಾರಿಕಾ ನಿವೇಶನಗಳ ರಚನೆ

200 ಮಹಿಳಾ ಉದ್ದಿಮೆಗಳ ನಿರೀಕ್ಷೆ

* * 

ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಕೈಗಾರಿಕಾ ಪಾರ್ಕ್‌ಗಳು ನೆರವಾಗಲಿವೆ. ಕೀಳರಿಮೆ ತಪ್ಪಿಸಲು ಹಾಗೂ ಆರ್ಥಿಕವಾಗಿ ಸಶಕ್ತರನ್ನಾಗಿಸುವುದು ರಾಜ್ಯ ಸರ್ಕಾರದ ಆಶಯ

ಸಿದ್ದರಾಮಯ್ಯ, ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry