7

ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

Published:
Updated:

ರಾಯಚೂರು: ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದರಿಂದ ಜಿಲ್ಲಾ ಬಿಜೆಪಿ ಘಟಕದಿಂದ ನಗರದಲ್ಲಿ ಸೋಮವಾರ ಸಂಭ್ರಮಾಚರಣೆ ಮಾಡಲಾಯಿತು.

ಜಿಲ್ಲಾ ಬಿಜೆಪಿ ಕಚೇರಿ ಹತ್ತಿರ ಹಾಗೂ ನಗರದ ತೀನ್ ಕಂದಿಲ್ ವೃತ್ತದಲ್ಲಿ ಪಟಾಕಿ ಸಿಡಿಸಿ, ನರೇಂದ್ರ ಮೋದಿ ಅವರಿಗೆ ಜೈಕಾರ ಹಾಕಿದರು. ನಂತರ ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದರು.

ರಾಜ್ಯ ಕಾರ್ಯದರ್ಶಿ ಎನ್.ಶಂಕರಪ್ಪ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಜೆ.ಶರಣಪ್ಪಗೌಡ, ಅಶೋಕ ಗಸ್ತಿ, ಬಸನಗೌಡ ಬ್ಯಾಗವಾಟ್, ದೊಡ್ಡ ಮಲ್ಲೇಶಪ್ಪ, ಆರ್.ತಿಮ್ಮಯ್ಯ, ರಾಜೇಂದ್ರ ಜಲ್ದಾರ, ಚಂದ್ರಶೇಖರ, ನರಸಪ್ಪ ಇದ್ದರು.

ಲಿಂಗಸುಗೂರು ವರದಿ:  ಲಿಂಗಸುಗೂರು ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಬಿಜೆಪಿ ಹಿರಿಯ ಮುಖಂಡ ಸಿದ್ದು ಬಂಡಿ, ಜಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಭುಸ್ವಾಮಿ ಅತ್ನೂರು ಮಾತನಾಡಿದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ ದೊಡ್ಡನಗೌಡ ಹೊಸಮನಿ, ಯುಮೋರ್ಚ್‌ ಅಧ್ಯಕ್ಷ ಭೀಮಶೇನ ಕುಲಕರ್ಣಿ, ಮುಖಂಡರಾದ ಲಕ್ಷ್ಮಿಕಾಂತರೆಡ್ಡಿ ಮುನ್ನೂರು, ಶಿವಪ್ರಕಾಶ, ಚೆನ್ನಬಸವ, ಬಸವರಾಜ ನಾಯಕ, ಪ್ರಭು ಹವಾಲ್ದಾರ, ಗವಿಸಿದ್ದಪ್ಪ ಸಾಹುಕಾರ, ಅಮರಣ್ಣ ಜಿರಾಳ, ಶ್ರೀವಾತ್ಸವ, ಸುರೇಶ ಮೇಟಿ, ಬಸವರಾಜ, ಎನ್‌. ಸ್ವಾಮಿ, ನಾರಾಯಣಪ್ಪ ನಾಯ್ಕ, ಹನುಮೇಶ ಸರಾಫ್‌ ಭಾಗವಹಿಸಿದ್ದರು.

ಮಸ್ಕಿ ವರದಿ: ಬಿಜೆಪಿ ಗೆಲುವು ಸಾಧಿಸುತ್ತಿರುವ ಸುದ್ದಿ ಹೊರ ಬರುತ್ತಿದ್ದಂತೆ ಪಟ್ಟಣದಲ್ಲಿ ಬಿಜೆಪಿಯ ನೂರಾರು ಕಾರ್ಯಕರ್ತರು ಸೋಮ ವಾರ ವಿಜಯೋತ್ಸವ ಆಚರಿಸಿದರು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಇರುವ ಬಿಜೆಪಿ ಕಚೇರಿಯಿಂದ ಪಕ್ಷದ ಹಿರಿಯ ಮುಖಂಡ ಮಹಾದೇವಪ್ಪಗೌಡ ಪೊಲೀಸ್‌ ಪಾಟೀಲ, ನಗರ ಘಟಕದ ಅಧ್ಯಕ್ಷ ಅಪ್ಪಾಜಿಗೌಡ ಪಾಟೀಲ ನೇತೃತ್ವದಲ್ಲಿ ಪ್ರಮುಖ ಬೀದಿಗಳಲ್ಲಿ ಬೈಕ್‌ ರ‍್ಯಾಲಿ ನಡೆಸಿದ ಕಾರ್ಯಕರ್ತರು ಪ್ರಧಾನಿ ನರೇಂದ್ರಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಾಗೂ ಬಿಜೆಪಿ ಪರವಾಗಿ ಘೋಷಣೆ ಹಾಕಿದರು. ಹಳೆಯ ಬಸ್‌ ನಿಲ್ದಾಣದಲ್ಲಿ ಪರಸ್ಪರ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಮಹಾದೇವಪ್ಪಗೌಡ ಪೊಲೀಸ್‌ ಮಾತನಾಡಿದರು.

ಪುರಸಭೆ ಅಧ್ಯಕ್ಷ ಮೌನೇಶ ಮುರಾರಿ, ಆರ್‌. ಬಸನಗೌಡ, ಶಂಕರಗೌಡ ಅಮರಾವತಿ, ಬಸ್ಸಣ್ಣ ತೊಂತನಾಳ, ಶಂಕ್ರಪ್ಪ ಹಳ್ಳಿ, ಸಂಗಮೇಶ ಹತ್ತಿಗುಡ್ಡ, ಶಿವಪುತ್ರಪ್ಪ ಅರಳಹಳ್ಳಿ, ನಾಗರಾಜ ಯಂಬಲದ, ಮೌನೇಶ ನಾಯಕ, ಹನುಮಂತಪ್ಪ ಪರಾಪುರ, ಕೃಷ್ಣ ಡಿ. ಚಿಗರಿ, ಬಾಲಾಜಿ ನಾಯಕ, ಕಿರಣ ಸಾನಬಾಳ, ಶಂಕರ್‌ ಎನ್‌ಜೆಡಿ, ಮಲ್ಲಯ್ಯ ಛಾವಣಿ, ಜಿ. ವೆಂಕಟೇಶ ನಾಯಕ, ಬಿಜೆಪಿಯ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಕಾರ್ಯಕರ್ತ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry