7

‘ಕೇಂದ್ರ ಸರ್ಕಾರದ ಅಭಿವೃದ್ಧಿಗೆ ಜನಬೆಂಬಲ’

Published:
Updated:

ಸುರಪುರ: ಗುಜರಾತ್‌ ಮತ್ತು ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದ್ದರಿಂದ ಪಕ್ಷದ ಕಾರ್ಯಕರ್ತರು ಗಾಂಧಿವೃತ್ತದಲ್ಲಿ ಸೋಮವಾರ ಪಟಾಕಿ ಸಿಡಿಸಿ, ಸಂಭ್ರಮಿಸಿದರು.

‘ಕೇಂದ್ರ ಸರ್ಕಾರದ ಅಭಿವೃದ್ಧಿಗೆ ನೀತಿಗೆ ಜನ ಬೆಂಬಲಿಸಿದ್ದಾರೆ. ಎರಡು ರಾಜ್ಯಗಳ ಚುನಾವಣೆ ಫಲಿತಾಂಶ ಗಮನಿಸಿದರೆ ಮುಂಬರುವ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಗೆಲವು ಸಾಧಿಸುವುದು ಖಚಿತ’ ಎಂದು ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡರಾದ ವಿಷ್ಣು ಗುತ್ತೇ ದಾರ, ಶ್ರೀನಿವಾಸ ನಾಯಕ ದರಬಾರಿ, ನಾಗರಾಜ ನಾಯಕ, ಪ್ರಕಾಶ ಕವಲಿ, ವೆಂಕಟೇಶನಾಯಕ ಬೈರಿಮಡ್ಡಿ, ವೆಂಕಟೇಶ ಚಟ್ನಳ್ಳಿ, ಯಲ್ಲಪ್ಪ ಬುಡಬೋವಿ, ಶರಣು ಸಾಹುಕಾರ, ಲಕ್ಷ್ಮಣ ಶಹಾಪೂರಕರ, ಮಹ್ಮದ್‌ ಜಹೀರ, ಮಹ್ಮದ ಹುಸೇನ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry