7

ಬಸ್ ನಿಲ್ದಾಣದ ಕಾಮಗಾರಿ ವಿಕ್ಷಣೆ

Published:
Updated:

ಮುಳಗುಂದ: ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಬಸ್ ನಿಲ್ದಾಣದ ಕಾಮಗಾರಿಯನ್ನು ಪಟ್ಟಣ ಪಂಚಾಯ್ತಿ ಹಿರಿಯ ಸದಸ್ಯ ಆರ್.ಎನ್.ದೇಶಪಾಂಡೆ ಹಾಗೂ ಸದಸ್ಯರು ವಿಕ್ಷಣೆ ಮಾಡಿದರು.

ಬಳಿಕ ಮಾತನಾಡಿದ ದೇಶಪಾಂಡೆ, ‘ಪಟ್ಟಣದ ಜನರ ಬಹುದಿನಗಳ ಬೇಡಿಕೆ ಈಡೆರಿದೆ. ₹ 1.84 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣದ ಕಾಮಗಾರಿಯನ್ನು ಸಾರಿಗೆ ಸಂಸ್ಥೆ ಕೈಗೊಂಡಿದೆ. ಬಹುತೇಕ ಕಾಮಗಾರಿ ಮುಕ್ತಾಯಗೊಂಡಿದ್ದು, ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.

ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಸುಂಕಾಪುರ, ಉಪಾಧ್ಯಕ್ಷ ಕೆ.ಎಲ್.ಕರಿಗೌಡರ, ಸದಸ್ಯರಾದ ಎ.ಡಿ.ಮುಜಾವರ, ಎಂ.ಎಸ್.ಕಣವಿ, ಅಶೋಕ ಹುಣಸಿಮರದ, ಸಾಹಿತ್ಯ ಅಕಾಡೆಮಿ ಸದಸ್ಯ ಬಿ.ಎಂ.ಹರಪನಹಳ್ಳಿ, ಮುಖ್ಯಾಧಿಕಾರಿ ಎಸ್.ಡಿ.ಅಗಡಿ, ಮರಿಯಪ್ಪ ನಡುಗೇರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry