7

ಅಪರಾಧಿಗೆ ಕಠಿಣ ಶಿಕ್ಷೆ ನೀಡಿ: ಮಾಳಪ್ಪ

Published:
Updated:

ಕೆಂಭಾವಿ: ವಿಜಯಪುರದಲ್ಲಿ ದಲಿತ ಬಾಲಕಿಯ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜೆ.ಸಾಗರ ಬಣ) ಒತ್ತಾಯಿಸಿದೆ. ಉಪತಹಶೀಲ್ದಾರ್‌ರಿಗೆ ಗುರುವಾರ ಮನವಿಪತ್ರ ಸಲ್ಲಿಸಿದ ಸಂಘಟನೆಯ ಸದಸ್ಯರು, ‘ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದರು.

ಸಂಘಟನೆಯ ಸಂಚಾಲಕ ಮಾಳಪ್ಪ ರಾಜಾಪುರ ಮಾತನಾಡಿ, ‘ಬಾಲಕಿಯ ಅತ್ಯಾಚಾರ ಪ್ರಕರಣವು ನಾಗರಿಕ ಸಮಾಜವು ತಲೆತಗ್ಗಿಸುವಂತಜಹ ಹೀನ ಕೃತ್ಯ. ಆರೋಪಿಗಳನ್ನು ಮರಣ ದಂಡನೆಗೆ ಗುರಿಪಡಿಸಬೇಕು’ ಎಂದರು.

‘ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಮೂರು ವರ್ಷಗಳಿಂದ ಅತ್ಯಾಚಾರ, ಕೊಲೆ, ದೊಂಬಿ ಸೇರಿದಂತೆ ಹಲವು ಅಹಿತಕರ ಘಟನೆಗಳು ನಡೆದರೂ ಸರ್ಕಾರ ಕಣ್ಣು ಮುಚ್ಚಿ ಕೂತಿದೆ’ ಎಂದರು. ಲಾಲಪ್ಪ ಹೊಸಮನಿ, ಮರೆಪ್ಪ ಮಲ್ಲಾ, ಬಸವಣ್ಣೆಪ್ಪ ಮಾಳಳ್ಳಿಕರ್, ಮರೆಪ್ಪ ಹದನೂರ, ಸಿದ್ದು ಬಸರಿಗಿಡ, ಲಾಲು ಮಾಳಳ್ಳಿಕರ್, ಯಮನಪ್ಪ, ಸಿದ್ದಪ್ಪ ಹದನೂರ, ರವಿ ಯಮನೂರ, ಧರ್ಮಸಿಂಗ್ ಹೊಸ್ಮನಿ ಇದ್ದರು.

ಮುದನೂರ: ಮುದನೂರ ಗ್ರಾಮದ ಬಿಜೆಪಿ ಕಾರ್ಯಕರ್ತರು ಹುಣಸಗಿ ತಹಸೀಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಬಸವರಾಜಪ್ಪಗೌಡ ಪಾಟೀಲ, ಮಲ್ಲಿಕಾರ್ಜನ ರೆಡ್ಡಿ ಯಡಹಳ್ಳಿ, ಸಿದ್ದು ಹೊಟ್ಟಿ, ಸಂಗಾರೆಡ್ಡಿ, ದೊಡ್ಡಪ್ಪ ತಳವಾರ, ಕೃಷ್ಣರೆಡ್ಡಿ, ಮಹಿಪಾಲರೆಡ್ಡಿ ಪಡೆಕನೂರ, ಗೋಪಾಲಸಿಂಗ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry